ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ದೇಶದ ಜಿಡಿಪಿ ಶೇ.7.5 ರಷ್ಟು ಕುಸಿತ! ದೇಶದಲ್ಲೀಗ ಆರ್ಥಿಕ ಹಿಂಜರಿತ ಅಧಿಕೃತ!

ಮುಂಬೈ: 2020 ನೇ ಆರ್ಥಿಕ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯ ಜಿಡಿಪಿ ಶೇ.7.5 ರಷ್ಟು ಕುಸಿತ ಕಂಡಿದೆ ಎಂದು ಸರ್ಕಾರಿ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ. ಆದರೆ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಆರ್ಥಿಕತೆ ಚೇತರಿಕೆ ಕಂಡಿದೆ.

ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‌ಎಸ್‌ಒ), ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ನ.27 ರಂದು 2020-21 ನೇ ಸಾಲಿನ ಎರಡನೇ ತ್ರೈಮಾಸಿಕ (ಜುಲೈ-ಸೆಪ್ಟೆಂಬರ್) ಅವಧಿಯ ಜಿಡಿಪಿಯನ್ನು ಸ್ಥಿರ (2011-12) ಮತ್ತು ಪ್ರಸ್ತುತ ಬೆಲೆಗಳ ಲೆಕ್ಕದಲ್ಲಿ ಪ್ರಕಟಿಸಿದ್ದು, ಎರಡನೇ ತ್ರೈಮಾಸಿಕದಲ್ಲಿ ಸ್ಥಿರ ಬೆಲೆಯಲ್ಲಿ ಜಿಡಿಪಿ 33.14 ಲಕ್ಷ ಕೋಟಿಯಷ್ಟಿದೆ. 2019-20 ರ ಎರಡನೇ ತ್ರೈಮಾಸಿಕದಲ್ಲಿ ಇದು 35.84 ಲಕ್ಷ ಕೋಟಿಯಷ್ಟಿತ್ತು. ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ.4.4 ರಷ್ಟು ಬೆಳವಣಿಗೆಯಲ್ಲಿದ್ದದ್ದು ಈ ಬಾರಿ ಶೇ.7.5 ರಷ್ಟು ಕುಸಿತ ಕಂಡಿದೆ ಎಂದು ಹೇಳಿದೆ.  

32.78 ಲಕ್ಷ ಕೋಟಿಯಷ್ಟಿದ್ದ 2019-20 ರ ಎರಡನೇ ತ್ರೈಮಾಸಿಕದ ಒಟ್ಟು ಮೌಲ್ಯವರ್ಧನೆ(ಜಿವಿಎ)  2020-21 ರಲ್ಲಿ 30.49 ಲಕ್ಷ ಕೋಟಿಗೆ ಕುಸಿದಿದ್ದು ಶೇ.7.0 ರಷ್ಟು ಇಳಿಕೆಯಾಗಿದೆ 

ಸ್ಥಿರ ಬೆಲೆ ಲೆಕ್ಕದಲ್ಲಿ 2020-21 ರ ಎರಡನೇ ತ್ರೈಮಾಸಿಕದ ಜಿಡಿಪಿ 47.22 ಲಕ್ಷ ಕೋಟಿಯಷ್ಟಿದ್ದು, 2019-20 ರಲ್ಲಿ 49.21 ಲಕ್ಷ ಕೋಟಿಯಷ್ಟಿತ್ತು. ಈ ಲೆಕ್ಕದಲ್ಲಿ ಕಳೆದ ಬಾರಿ ಬೆಳವಣಿಗೆ ಶೇ.5.9 ರಷ್ಟಿದ್ದದ್ದು ಈ ಬಾರಿ ಶೇ.4.0 ರಷ್ಟಕ್ಕೆ ಕುಸಿದಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಧಿಸಲಾಗಿತ್ತು. ಆದರೆ ಲಾಕ್ ಡೌನ್ ತೆರವುಗೊಳಿಸಿದ ನಂತರದ ಪರಿಸ್ಥಿತಿಗಳೂ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ.

Leave a Reply

Your email address will not be published. Required fields are marked *

error: Content is protected !!