ಮತೀಯ, ಗೂಂಡಾಗಿರಿ ಪ್ರಕರಣ ಗಂಭೀರವಾಗಿ ಪರಿಗಣಿಸಲಾಗುವುದು- ದ.ಕ. ಜಿಲ್ಲಾ ನೂತನ ಎಸ್ಪಿ ಡಾ.ಅರುಣ್

ಮಂಗಳೂರು, ಮೇ 30: ದ.ಕ. ಜಿಲ್ಲಾ ನೂತನ ಎಸ್ಪಿಯಾಗಿ ಡಾ. ಅರುಣ್ ಕೆ. ಶುಕ್ರವಾರ ನಿರ್ಗಮನ ಎಸ್ಪಿ ಯತೀಶ್ ಎನ್. ಅವರಿಂದ ಅಧಿಕಾರ ಸ್ವೀಕರಿಸಿದರು.

ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

ಮತೀಯ ಪ್ರಕರಣ, ಗೂಂಡಾಗಿರಿ ಪ್ರಕರಣಗಳ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು. ರೌಡಿ ಶೀಟರ್ ಗಳ ಚಲನವಲನಗಳ ಬಗ್ಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ನಿಗಾ ಇರಿಸಲಾಗುವುದು. ಅಕ್ರಮ ಗಣಿಗಾರಿಕೆ, ಗ್ಯಾಂಬ್ಲಿಂಗ್, ಬೆಟ್ಟಿಂಗ್ ಹಾಗೂ ಇತರ ಕಾನೂನುಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ನೇರವಾಗಿ ಮೊಬೈಲ್ ಸಂಖ್ಯೆ 9480805301 ಅಥವಾ ಕಚೇರಿ ಸಂಖ್ಯೆ 0824 2220503ಗೆ ಮಾಹಿತಿ ನೀಡಬಹುದು ಎಂದು ನೂತನ ಎಸ್ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ”

Leave a Reply

Your email address will not be published. Required fields are marked *

error: Content is protected !!