ಕದನ ವಿರಾಮ ಘೇೂಷಣೆ- ಸಾಧಕ ಬಾಧಕಗಳ ವಿಶ್ಲೇಷಣೆ…
ಸದ್ಯದ ಪರಿಸ್ಥಿತಿಯಲ್ಲಿ ಭಾರತ ಪಾಕಿಸ್ತಾನಗಳ ನಡುವಿನ ಕದನಕ್ಕೆ ವಿರಾಮ ಘೇೂಷಣೆ ಮಾಡಿರುವುದು ಭಾರತಿಯರಲ್ಲಿ ಸಾಕಷ್ಟು ಚಚೆ೯ಗೆ ಗ್ರಾಸವಾಗಿದೆ.
ಪಹಾಲ್ಗಮ್ ನಲ್ಲಿ ಅಮಾನುಷವಾಗಿ ಭಾರತೀಯರ ಜೀವ ತೆಗೆದ ಪಾಕ್ ಪ್ರಚೇೂದಿತ ಭಯೇೂತ್ಪಾದಕರ ಹೇಯ ಕೃತ್ಯ. ಇದಕ್ಕೆ ಪ್ರತಿಕಾರವಾಗಿ ಜಲ ಯುದ್ಧ ಮಾತ್ರವಲ್ಲ ಇಡಿ ಸಂಬಂಧಗಳನ್ನೆ ಕಡಿದುಕೊಂಡು ಭಯೇೂತ್ಪಾದನೆಗೆ ಕೊನೆ ಎಳೆಯುತ್ತೇವೆ ಅನ್ನುವ ತರದಲ್ಲಿ ಭಾರತೀಯ ಸೈನ್ಯ ಪಾಕಿಸ್ತಾನದ ಭಯೇೂತ್ಪಾದಕರ ನೆಲೆಗಳ ಮೇಲೆ ಸಿಂದೂರ ಕಾರ್ಯಚರಣೆ ಹೆಸರಿನೊಂದಿಗೆ ಪಾಕಿಗಳ ಜೀವ ನೆಲವನ್ನು ದ್ವಂಸಮಾಡುವುದರೊಂದಿಗೆ ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆ ದಾಳಿಮಾಡಿ ಪಾಕಿಗಳ ಉಸಿರನ್ನೆ ಹಿಡಿದು ಬಿಟ್ಟೇವು ಅನ್ನುವ ಪರಿಸ್ಥಿತಿಗೆ ಬಂತು ಬಂತು ಅನ್ನುವಾಗಲೇ ಪಾಕಿಸ್ತಾನದ ಒಬ್ಬ ಮಿಲಿಟರಿ ಅಧಿಕಾರಿ ಭಾರತದ ಮಿಲಿಟರಿ ಮುಖ್ಯಸ್ಥನಿಗೆ ಕರೆ ಮಾಡಿ ನಮಗೆ ಯುದ್ಧ ಮಾಡಿ ಸಾಕಾಗಿದೆ ಸ್ವಲ್ಪ ಯುದ್ಧ ನಿಲ್ಲಿಸುವ ಮಾರಾಯ್ರೆ.. ಅಂದ ತಕ್ಷಣವೇ ಈ ಕದನ ವಿರಾಮಕ್ಕೆ ಭಾರತದ ಕಡೆಯಿಂದ ಒಪ್ಪಿಗೆ ಬಂತೇ ಅನ್ನುವ ಬಹು ದೊಡ್ಧ ನೇೂವಿನ ಪ್ರಶ್ನೆ ಭಾರತಿಯವರಲ್ಲಿ ಮೂಡಿ ಬಂದಿರುವುದು ಸಹಜ.
ಆದರೆ ಸದ್ಯಕ್ಕೆ ಈ ಕದನ ವಿರಾಮದ ಪ್ರಶ್ನೆ ನಾವು ಆರಾಮಮವಾಗಿ ಕೇಳಿ ವಿರಮಿಸಲು ಸಾಧ್ಯವಿಲ್ಲ. ಈ ಕುರಿತಾಗಿ ನಾವು ಗಂಭೀರವಾಗಿ ಆಲೇೂಚಿಸ ಬೇಕಾದ ಸಂದಿಗ್ಧ ಪರಿಸ್ಥಿತಿಯೂ ಹೌದು. ನಮ್ಮಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಅಂದರೆ ಈ ಕದನ ವಿರಾಮದ ಪ್ರಶ್ನೆ ಭಾರತಕ್ಕೆ ಅನಿವಾರ್ಯತೆ ಇದೆಯಾ? ಒಂದಂತು ಸತ್ಯ. ಯಾವುದೇ ಯುದ್ಧವನ್ನು ನಿರಂತರವಾಗಿ ಮುಂದುವರಿಸಲು ಸಾಧ್ಯವಿಲ್ಲ ಅನ್ನುವುದು ಜಗತ್ತಿನಲ್ಲಿ ನಡೆದ ಎಲ್ಲಾ ಯುದ್ಧಗಳು ಹೇಳಿದ ವಾಸ್ತವಿಕತೆಯ ಇತಿಹಾಸ. ಆದರೆ ಭಾರತೀಯರಲ್ಲಿ ಮೂಡುವ ಮೊದಲ ಪ್ರಶ್ನೆ ಅಂದರೆ ಭಯೇೂತ್ಪಾದಕರನ್ನು ಸಂಪೂರ್ಣವಾಗಿ ಪಾಕಿಸ್ತಾನದಲ್ಲಿ ಗುರುತಿಸಿ ಹೊಡೆದು ಹಾಕುವಲ್ಲಿ ನಾವು ಯಶಸ್ವಿಯಾಗಿದ್ದೇವಾ? ಅವರ ನೆಲೆಗಳನ್ನು ಧ್ವಂಸ ಮಾಡಿರಬಹುದು ರಕ್ತ ಬೀಜಾಸುರ ಕುಲದಲ್ಲಿ ಹುಟ್ಟಿ ಬರುವ ಈ ಪಾಪಿ ಪಿಶಾಚಿಗಳಿಗೆ ಈ ಶಿಕ್ಷೆ ಸಾಲದು ಅನ್ನುವ ನೇೂವು ಭಾರತಿಯವರಲ್ಲಿ ಇನ್ನೂ ಇದೆ.
ಇನ್ನೊಂದು ಪ್ರಶ್ನೆ ಭಾರತೀಯರಲ್ಲಿ ಪ್ರಮುಖವಾಗಿ ಮೂಡುವ ಪ್ರಶ್ನೆಯಂದರೆ, ಕನಿಷ್ಠ ಪಕ್ಷ ಪಾಕಿಸ್ತಾನಿ ಆಕ್ರಮಿತ ಕಾಶ್ಮೀರದ ಭಾರತದ ನೆಲವನ್ನು(ಪಿ.ಒ.ಕೆ) ಆಕ್ರಮಿಸಿಕೊಳ್ಳಲು ನಮಗೆ ಸಿಕ್ಕ ಒಂದು ಅವಕಾಶ ಕಳೆದುಕೊಂಡ ನೇೂವು ಕಾಡುತ್ತಿರಬಹುದು. ಮಾತ್ರವಲ್ಲ ಈ ನಿಟ್ಟಿನಲ್ಲಿ ಮೇೂದಿ ಸರ್ಕಾರದ ಮೇಲೆ ಸಾಕಷ್ಟು ಭರವಸೆಯೂ ಜನರಲ್ಲಿ ಇತ್ತು.ಈ ಅವಕಾಶವನ್ನು ಮೇೂದಿಯವರು ಯಾಕೆ ಕಳೆದುಕೊಂಡರು ಅನ್ನುವ ವೇದನೆಯೂ ಭಾರತೀಯರಲ್ಲಿ ಮೂಡಿ ಬಂದಿರುವುದು ಸತ್ಯ.
ಇದಿಷ್ಟು ಪ್ರಮುಖ ನೇೂವಿನ ಪ್ರಶ್ನೆಗಳು ಭಾರತದ ಕಡೆಯಿಂದ ಕೇಳಿ ಬರುವುದಾದರೆ ಅದೇ ಪಾಕಿಸ್ತಾನದ ಕಡೆಯಿಂದ ಕೇಳ ಬೇಕಾದ ಪ್ರಮುಖ ಪ್ರಶ್ನೆಗಳೆಂದರೆ ಈ ಯುದ್ಧ ವಿರಾಮ ಪಾಕಿಸ್ತಾನಕ್ಕೆ ಸಿಕ್ಕಿದ ಗೆಲುವಂತ ಪರಿಗಣಿಸಬಹುದಾ?ಖಂಡಿತವಾಗಿಯೂ ಅಲ್ಲ.. ಯುದ್ಧದಲ್ಲಿ ಸೇೂತವ ಸತ್ತ ಹಾಗೆ ಅನ್ನುವ ತರದಲ್ಲಿ ಪಾಕಿಸ್ತಾನ ಈ ಯುದ್ಧದಲ್ಲಿ ಜೀವ ಉಳಿಸಿಕೊಂಡಿದೆ ಎಂದಷ್ಟೇ ಹೇಳ ಬಹುದು.ಹಾಗಾಗಿ ಯುದ್ಧ ವಿರಾಮಕ್ಕಾಗಿ ಅಂಗಲಾಚಿದ ಕಾರಣ ಅವರೇ ನೇರವಾಗಿ ಭಾರತವನ್ನು ಸಂಪಕ೯ ಮಾಡಿರುವುದು. ಮಾತ್ರವಲ್ಲ ಇದರ ಹಿಂದೆ ಅಮೇರಿಕಾದ ಕೈವಾಡವು ಇದೆ ಅನ್ನುವುದು ಅಷ್ಟೇ ಸ್ವಷ್ಟ. ಹಾಗಾಗಿ ಅಮೇರಿಕಾದ ಟ್ರಂಪ್ ಎದೆ ತಟ್ಟಿ ತನ್ನಿಯಿಂದಲೇ ಭಾರತ ಪಾಕಿಸ್ತಾನದ ಭೀಕರ ಯುದ್ಧಕ್ಕೆ ಕಡಿವಾಣ ಬಿದ್ದಿದೆ ಅನ್ನುವ ತರದಲ್ಲಿ ಎಲ್ಲರಿಗಿಂತ ಮೊದಲಾಗಿ ಬಿಂಬಿಸಿಕೊಂಡಿದ್ದಾರೆ ಅಷ್ಟೇ.
ಒಂದಂತು ಸತ್ಯ ಇದು ಕೇವಲ ಕೇವಲ ಮಿಲಿಟರಿ ಅಧಿಕಾರಿಗಳ ನಡುವೆ ನಡೆದಮಾತುಕತೆ. ಹಾಗಂತ ಮೇೂದಿಯವರಿಗೆ ಗೆುಾತ್ತಿಲ್ಲದೆ ನಡೆದ ಮಾತುಕತೆಯಂತು ಅಲ್ಲ. ಇದಕ್ಕೂ ಅವರ ಮೌಖಿಕ ಅನುಮತಿ ಇದೆ ಅನ್ನುವುದು ನಿಜ. ಪಾಕಿಸ್ತಾನದದ ಮಿಲಿಟರಿ ಕಾರ್ಯಚರಣೆ ಸಂಪೂರ್ಣವಾಗಿ ಅಲ್ಲಿನ ಪ್ರಧಾನಿಗಳ ಕೈಯಲ್ಲೂ ಇಲ್ಲ ಮಿಲಿಟರಿ ಅಧಿಕಾರಿಗಳ ಕೈಯಲ್ಲು ಇಲ್ಲ. ಭಯೇೂತ್ಪಾದಕರ ಕೈಯಲ್ಲಿ ಇದೆ ಅನ್ನುವುದು ಕದನ ವಿರಾಮದ ಮಾತಿನ ಅನಂತರದಲ್ಲಿ ಗಡಿಭಾಗದಲ್ಲಿ ಆದ ಘಟನೆಗಳು ಸಾಕ್ಷ್ಯಿ. ಹಾಗಾಗಿ ಈ ಕದನ ವಿರಾಮ ಕೇವಲ ಕೆಲವೇ ಗಂಟೆಗಳ ಟೀ ಬ್ರೇಕ್ ಸಮಯವೆಂದು ಕರೆದರೂ ತಪ್ಪಾಗಲಾರದು ಅನ್ನಿಸುತ್ತದೆ?.
ಒಂದು ವೇಳೆ ಸರ್ಕಾರದ ಮಟ್ಟದಲ್ಲಿ ಕದನ ವಿರಾಮ ಮಾತುಕತೆ ನಡೆದರೆ ಭಾರತದ ಕಡೆಯಿಂದ ಕೆಲವೊಂದು ಗಟ್ಟಿ ನಿಲುವು ತೆಗೆದುಕೊಳ್ಳಲೇ ಬೇಕು. ಅನ್ನುವುದು ಭಾರತೀಯರ ಒತ್ತಾಸೆಯೂ ಹೌದು.
1.ಇನ್ನು ಮುಂದೆ ಭಾರತಕ್ಕೆ ಭಯೇೂತ್ಪಾದನೆ ಪಾಕಿಗಳ ಕಡೆಯಿಂದ ನಡೆದದ್ದು ಸಾಬೀತಾದರೆ ಇದು ನಮ್ಮೊಳಗಿನ ಮುಂದಿನ ಯುದ್ಧಕ್ಕೆ ನಾವು ಸಿದ್ಧರಾಗ ಬೇಕಾಗುತ್ತದೆ.
2.ನದಿ ನೀರಿನ ಹಂಚಿಕೆಯಲ್ಲಿ 1962 ನಿಯಮ ಮತ್ತೆ ಮರು ಸ್ಥಾಪನೆ ಇಲ್ಲ. ನಾವು ಬಳಸಿ ಬಿಟ್ಟ ನೀರು ಮಾತ್ರ ನಿಮಗೆ ಲಭ್ಯ. ಇದಕ್ಕಾಗಿ ಮತ್ತೆ ಚಕಾರವೆತ್ತ ಬಾರದು.
3.ಸದ್ಯಕ್ಕೆ ನಮ್ಮ ನಿಮ್ಮ ಜೊತೆ ಯಾವುದೇ ಆಥಿ೯ಕ ಶೈಕ್ಷಣಿಕ ಆರೇೂಗ್ಯ ಸಂಬಂಧಗಳು ಇಲ್ಲ.ಮುಂದೆ ಪರಿಸ್ಥಿತಿ ಸುಧಾರಿಸಿದರೆ ನೇೂಡೇೂಣ.
4.ಪಾಕಿಸ್ತಾನದಿಂದ ಭಾರತಕ್ಕೆ ಬರಲು ಯಾವುದೇ ವೀಸಾ ಖಂಡಿತವಾಗಿಯೂ ಕೊಡಬಾರದು, ಗೇಟ್ ಶಾಶ್ವತವಾಗಿ ಬಂದ್. ಅಂತರರಾಷ್ಟ್ರೀಯ ವೈಮಾನಿಕ ಜಲ ಮಾಗ೯ಕ್ಕೆ ಯಾರು ಕೂಡ ತಡೆ ಮಾಡ ಬಾರದು.
ಇಷ್ಟು ಷರತ್ತುಗಳಿಗೆ ತಲೆಭಾಗಿದರೆ ಮಾತ್ರ ಯುದ್ಧ ನಿಲ್ಲಿಸಿ ಸುಮ್ಮನಿರ ಬಹುದು..ಇದಕ್ಕೆ ಪಾಕಿಸ್ತಾನ ಒಪ್ಪುತ್ತದಾ ?..ಒಪ್ಪುವುದು ಕಷ್ಟ..ಹಾಗಾಗಿ ಮುಂದಿನ ಮೊದಲ ಹೆಜ್ಜೆ ಭಯೇೂತ್ಪಾದಕರ ಕಡೆ ಅಲ್ಲ ಪಿ.ಓ.ಕೆ.ಕಡೆಗೆ ಅನ್ನುವುದನ್ನು ಈಗಲೇ ಪ್ರಕಟಸಿ ಬಿಡಿ.
ಇನ್ನೊಂದು ಬಹುಮುಖ್ಯವಾಗಿ ನಮ್ಮ ಕೇಂದ್ರ ಸರಕಾರಕ್ಕೂ ಹೇಳ ಬೇಕಾದ ಪ್ರಮುಖವಾದ ಜವಾಬ್ದಾರಿಯ ಮಾತು. ನಮ್ಮ ದೇಶದೊಳಗಿನ ಭಯೇೂತ್ಪಾದಕ ಶಕ್ತಿಗಳನ್ನು ಸಂಪೂರ್ಣವಾಗಿ ಬುಡ ಸಮ್ಮೇತವಾಗಿ ಕಿತ್ತು ಬಿಸಾಡುವುದು ನಮ್ಮೆಲ್ಲರ ಜವಾಬ್ದಾರಿ ಅನ್ನುವುದನ್ನು ನಾವು ಖಂಡಿತವಾಗಿಯೂ ಮರೆಯುವಂತಿಲ್ಲ. ನಮ್ಮ ನೆಲದಲ್ಲಿ ಇಂತಹ ಘಟನೆಗಳು ನಡೆದಾಗ ನಮ್ಮ ಜವಾಬ್ದಾರಿಯ ಕಡೆಗೂ ಬೊಟ್ಟು ಮಾಡಿಕೊಳ್ಳ ಬೇಕಾಗುತ್ತದೆ. ಬೇರೆಯವರ ಕಡೆಗೆ ತೇೂರಿಸುವ ಮೊದಲು ನಮ್ಮ ಗಡಿ ಭದ್ರತೆಯ ಕಾರ್ಯದಕ್ಷತೆಯ ಕಡೆಗೂ ಗಂಭೀರವಾಗಿ ಗಮನ ಹರಿಸಲೇ ಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಮುಂದಿನ ದಿನಗಳಲ್ಲಿ ಪ್ರಧಾನಿ ಮೇೂದಿಯವರು ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸ ಬೇಕಾದ ಅನಿವಾರ್ಯತೆಯೂ ಬರಬಹುದು.
ವಿಶ್ಲೇಷಣೆ: ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.





