ಉಡುಪಿ: ಮೇ 17ರಿಂದ ಪ್ರಾಚೀನ ಕಲ್ಲಚ್ಚು ಕಲಾಕೃತಿಗಳ ಪ್ರದರ್ಶನ

Oplus_131072

ಉಡುಪಿ, ಮೇ 15: 1890-1947ರ ಅವಧಿಯ ಭಿತ್ತಿಪತ್ರ, ಬಟ್ಟೆ ಲೇಬಲ್, ಬೆಂಕಿ ಪೊಟ್ಟಣದ ಮೇಲಿನ ಲೇಬಲ್‌ಗಳ ಕಲ್ಲಚ್ಚು ಕಲಾ ಪ್ರದರ್ಶನವನ್ನು ಕುಂಜಿಬೆಟ್ಟುವಿನ ಅದಿತಿ ಕಲಾ ಗ್ಯಾಲರಿಯಲ್ಲಿ ಮೇ 17ರಿಂದ 19ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅದಿತಿ ಆರ್ಟ್ ಗ್ಯಾಲರಿಯ ಆಡಳಿತ ವಿಶ್ವಸ್ಥ ಡಾ. ಕಿರಣ್ ಆಚಾರ್ಯ ತಿಳಿಸಿದ್ದಾರೆ.

ಗ್ಯಾಲರಿಯಲ್ಲಿಂದು ಕರೆದ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೂಲ ಪ್ರತಿಗಳನ್ನು ಬಹು ಪ್ರತಿಗಳನ್ನಾಗಿ ಮಾಡುವ ಸಂಪ್ರದಾಯ ಬದ್ಧ ಕಲೆಯೇ ಕಲ್ಲಚ್ಚು. ಇದೊಂದು ಪುರಾತನ ಮುದ್ರಣ ತಂತ್ರಗಾರಿಕೆ. ಕಲ್ಲಿನ ಮೇಲೆ ಚಿತ್ರಿಸಿ ಅದನ್ನು ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಿ ಅದರ ಮೂಲಕ ಚಿತ್ರ ಪ್ರತಿಗಳನ್ನು ತೆಗೆಯುವ ಕಲೆ. ಪುರಾತನ ಕಲ್ಲಚ್ಚು ಕಲಾಕೃತಿಗಳ ಸಂರಕ್ಷಣೆ, ಅಧ್ಯಯನ ಮತ್ತು ಸಾಮಾಜಿಕ ಬದಲಾವಣೆಗಳ ದಾಖಲೀಕರಣ ಈ ಪ್ರದರ್ಶನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಮೇ 17 ರಂದು ಬೆಳಗ್ಗೆ 10.30 ಕ್ಕೆ ಮುದ್ರಣ ಕ್ಷೇತ್ರದ ಯಶಸ್ವಿ ಉದ್ಯಮಿ ಮಂಗಳೂರಿನ ನೇಮಿರಾಜ್ ಶೆಟ್ಟಿ ಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಪ್ರಸಿದ್ಧ ಕಲಾವಿದ ಮತ್ತು ಸಂಶೋಧಕ ಡಾ.ಜನಾರ್ದನ ಹಾವಂಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11 ರಿಂದ ಸಂಜೆ 7 ರ ವರೆಗೆ ಕಲಾಕೃತಿಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಗ್ಯಾಲರಿಯ ವಿಶ್ವಸ್ಥರಾದ ಶ್ರೀನಿವಾಸ ಭಟ್, ಪ್ರವೀಣಾ ಮೋಹನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!