ದೇಶದಲ್ಲಿ ಸೌಹಾರ್ದತೆ ಕದಡುತ್ತಿರುವ ಬಿಜೆಪಿ: ಕಣ್ಣೂರು ರ್‍ಯಾಲಿಯಲ್ಲಿ ರಾಹುಲ್ ವಾಗ್ದಾಳಿ

ಕಣ್ಣೂರು: ದೇಶದಲ್ಲಿ ಬಿಜೆಪಿಯು ಸೌಹಾರ್ದತೆಯನ್ನು ಕೆಡಿಸುತ್ತಿದ್ದು, ಆ ಮೂಲಕ ದೇಶದ ಕೋಟ್ಯಂತರ ಜನರಿಗೆ ಹಾನಿಯೆಸಗಿದೆಯೆಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಗುರುವಾರ ಆಪಾದಿಸಿದ್ದಾರೆ.

ಕೇರಳದ ಕಣ್ಣೂರಿನಲ್ಲಿ ಬೃಹತ್ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ವಿಭಿನ್ನತೆಗಳನ್ನು ಒಪ್ಪಿಕೊಳ್ಳುತ್ತದೆ. ಆದರೆ ಬಿಜೆಪಿಯು ದೇಶದ ವೈವಿಧ್ಯತೆಯನ್ನು ಬದಲಾಯಿಸಲು ಯತ್ನಿಸುತ್ತಿದೆ ಎಂದು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯು ಪ್ರಾಯಶಃ ದೇಶದ ಆಧುನಿಕ ಇತಿಹಾಸದಲ್ಲಿ ಭಾರತದ ಸಂವಿಧಾನ ಹಾಗೂ ನಮ್ಮ ದೇಶದ ಪ್ರಜಾತಾಂತ್ರಿಕ ಸ್ವರೂಪವನ್ನು ರಕ್ಷಿಸುವ ಕುರಿತಾದುದಾಗಿದೆ ’’ ಎಂದು ಅವರು ಹೇಳಿದರು.

ಭಾರತದಲ್ಲಿ ಬಿಜೆಪಿಯು ಇಂದು ಏನನ್ನು ಮಾಡಲು ಯತ್ನಿಸುತ್ತಿದೆಯೋ ಅಂಥದ್ದನ್ನು ಹಿಂದೆಂದೂ ಯಾವುದೇ ರಾಜಕೀಯ ಪಕ್ಷವು ಮಾಡಿಲ್ಲ. ಸಂವಿಧಾನವು ಆಧುನಿಕ ಭಾರತದ ಆಧಾರಸ್ತಂಭ ವಾಗಿದೆ. ಸಂವಿಧಾನವು ನಮ್ಮ ಜನತೆಗೆ ಸಮಾನವಾದ ಹಕ್ಕುಗಳು ಹಾಗೂ ಸಮಾನವಾದ ಅವಕಾಶಗಳನ್ನು ನೀಡಿದೆ. ದೇಶದ ವಿವಿಧ ಸಂಸ್ಥೆಗಳಿಂದ ನಮ್ಮ ಸಂವಿಧಾನವು ಸಂರಕ್ಷಿಸಲ್ಪಟ್ಟಿದೆ ಎಂದು ಗಾಂಧಿ ಹೇಳಿದ್ದಾರೆ.

ಆದರೆ ಈ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವ ಮೂಲಕ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅನ್ನು ರಾಜಕೀಯ ಅಸ್ತ್ರಗಳಾಗಿ ಬಳಸಿಕೊಳ್ಳುವ ಮೂಲಕ ಬಿಜೆಪಿಯು ನಮ್ಮ ದೇಶದ ಸ್ವರೂಪವನ್ನು ಬದಲಾಯಿಸಲು ಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷ ಹಾಗೂ ಯುಡಿಎಫ್ ಭಾರತದ ವೈವಿಧ್ಯತೆಯನ್ನು ಒಪ್ಪಿಕೊಳ್ಳುತ್ತದೆ. ನಾವು ವಿವಿಧ ಭಾಷೆಗಳನ್ನು, ಸಂಪ್ರದಾಯಗಳನ್ನು, ವಿವಿಧ ಇತಿಹಾಸಗಳನ್ನು ಹಾಗೂ ನಮ್ಮ ಜತೆಯ ಅಭಿವ್ಯಕ್ತಿಗಳನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಬಿಜೆಪಿಯು ಒಂದೇ ಇತಿಹಾಸ, ಒಂದೇ ದೇಶ, ಒಂದೇ ಭಾಷೆಯನ್ನು ದೇಶದ ಜನತೆಯ ಮೇಲೆ ಹೇರಲು ಬಯಸುತ್ತಿದೆ ಎಂದು ಗಾಂಧಿ ಹೇಳಿದರು.

ದೇಶದ ವೈವಿಧ್ಯತೆಯನ್ನು ಬದಲಾಯಿಲು ಯತ್ನಿಸುವ ಮೂಲಕ ಬಿಜೆಪಿಗರು ತಮ್ಮ್ನ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದವರು ಟೀಕಿಸಿದಸು.

ಮೊದಲನೆಯದಾಗಿ ದೇಶದ ವೈವಿಧ್ಯತೆಯನ್ನು ಎಂದಿಗೂ ಬದಲಾ.ಯಿಸಲು ಸಾಧ್ಯವಿಲ್ಲ. ಬಿಜೆಪಿಗರೇ ನೀವು ನಮ್ಮ ಸಮಯವನ್ನು ವ್ಯರ್ಥಗೊಳಿಸುತ್ತಿದ್ದೀರಿ. ಅಲ್ಲದೆ ನೀವು ದೇಶದ ಜನತೆಯ ಶಕ್ತಿಯನ್ನು ವ್ಯರ್ಥಗೊಳಿಸುತ್ತಿದ್ದೀರಿ. ದೇಶದಲ್ಲಿ ಅಸೌಹಾರ್ದತೆ ಯನ್ನು ಸೃಷ್ಟಿಸುವ ಮೂಲಕ ಕೋಟ್ಯಂತರ ಜನರಿಗೆ ಹಾನಿಯೆಸಗಿದ್ದೀರಿ ಎಂದು ಗಾಂಧಿ ಹೇಳಿದರು.

ಕಣ್ಣೂರಿನಿಂದ ಸ್ಪರ್ಧಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಹಾಗೂ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಜಮೋಹನ್ ಉಣ್ಣಿತ್ತಾನ್ ಅರ ಪರವಾಗಿ ರಾಹುಲ್ ಚುನಾವಣಾ ಪ್ರಚಾರ ನಡೆಸಿದರು.

Leave a Reply

Your email address will not be published. Required fields are marked *

error: Content is protected !!