ಪಡುಬಿದ್ರಿ: ಬಸ್ ಟೈಮಿಂಗ್ ವಿವಾದ- ಹೆದ್ದಾರಿಗೆ ಬಸ್ ಅಡ್ಡ ಇಟ್ಟ ಚಾಲಕ!

ಪಡುಬಿದ್ರಿ: ಟೈಮಿಂಗ್ ವಿಚಾರಕ್ಕೆ ವಾಗ್ವಾದ ನಡೆದ ಬಳಿಕ ಬಸ್ಸನ್ನೇ ಹೆದ್ದಾರಿಗೆ ಅಡ್ಡವಾಗಿ ನಿಲ್ಲಿಸಿ ಬಸ್ ತಂಗುದಾಣದಲ್ಲಿ ‘ವಿಶ್ರಾಂತಿ’ ಪಡೆದ ವಿಚಿತ್ರ ಘಟನೆ ಗುರುವಾರ ಅಪರಾಹ್ನ ಪಡುಬಿದ್ರಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.

ಕಾಪುವಿನ ಟೈಂ ಕೀಪರ್ ಶರತ್ ಹಾಗೂ ಖಾಸಗಿ ಬಸ್ ಚಾಲಕ ಅಜೀಜ್ ಮಧ್ಯೆ ಟೈಮಿಂಗ್ ಕುರಿತಾಗಿ ನಡೆದಿದ್ದ ವಾಗ್ವಾದ ನಡೆದಿತ್ತ. ಬಳಿಕ ಪಡುಬಿದ್ರಿ ತಲುಪಿದ ಸರ್ವಿಸ್ ಬಸ್ ಎಂಎಂಎಸ್‌ಗೆ ಟೈಂ ಕೀಪರ್ ಶರತ್ ಅಡ್ಡ ನಿಂತಾಗ ಕುಪಿತಗೊಂಡ ಚಾಲಕ ಅಜೀಜ್ ತನ್ನ ಮಾಲಕರಿಗೆ ಕರೆ ಮಾಡಿ, ಬಳಿಕ ಬಸ್ಸನ್ನೇ ಹೆದ್ದಾರಿಗೆ ಅಡ್ಡವಾಗಿ ನಿಲ್ಲಿಸಿ ಬಸ್ ತಂಗುದಾಣದಲ್ಲಿ ‘ವಿಶ್ರಾಂತಿ’ ಪಡೆದಿದ್ದಾನೆ. ಈ ಕುರಿತಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರುಗಳು ದಾಖಲಾಗಿವೆ.

ಸುಮಾರು 5 ನಿಮಿಷಗಳ ಕಾಲ ನಡೆದಿದ್ದ ಈ ಪ್ರಹಸನದಲ್ಲಿ ಪಡುಬಿದ್ರಿ ಪೊಲೀಸರ ಮಧ್ಯಪ್ರವೇಶದವರೆಗೂ ಉಡುಪಿ – ಮಂಗಳೂರು ಏಕಮುಖ ರಸ್ತೆಯಲ್ಲಿ ಹೆದ್ದಾರಿ ವಾಹನ ಸಂಚಾರಕ್ಕೆ ಬಹಳ ಅಡಚಣೆ ಆಗಿತ್ತು.

Leave a Reply

Your email address will not be published. Required fields are marked *

error: Content is protected !!