ದೇವರ ಸೇವಕ ಫಾದರ್ ಆಲ್ಫ್ರೆಡ್ ರೋಚ್ ಜನ್ಮ ಶತಮಾನೋತ್ಸವ ಆಚರಣೆ

ಬ್ರಹ್ಮಾವರ: ದೇವರ ಸೇವಕ ಫಾದರ್ ಆಲ್ಫ್ರೆಡ್ ರೋಚ್ ಅವರ ಜನ್ಮ ಶತಮಾನೋತ್ಸವವನ್ನು ಬ್ರಹ್ಮಾವರದ ತಿರು ಕುಟುಂಬ ದೇವಾಲಯದಲ್ಲಿ ಏಪ್ರಿಲ್ 3, 2024 ರಂದು ಆಚರಿಸಲಾಯಿತು.

ಫಾದರ್ ಆಲ್ಫ್ರೆಡ್ ರೋಚ್ ಅವರು 1924 ರ ಏಪ್ರಿಲ್ 3 ರಂದು ಬಾರ್ಕೂರಿನ ಸೇಂಟ್ ಪೀಟರ್ಸ್ ಚರ್ಚ್‌ಗೆ ಸೇರಿದ ಪಾಂಡೇಶ್ವರ ಕುದ್ರು ಎಂಬ ಸಣ್ಣ ದ್ವೀಪದಲ್ಲಿ ಜನಿಸಿದ್ದರು. ಈ ಜನ್ಮ ಶತಮಾನೋತ್ಸವದ ಅಂಗವಾಗಿ ಧರ್ಮಪ್ರಾಂತ್ಯದ ವಿವಿಧ ಚರ್ಚ್ ಗಳಿಂದ ಆಗಮಿಸಿದ ಭಕ್ತರಿಂದ ಕೃತಜ್ಞತಾ ಬಲಿಫೂಜೆಯನ್ನು ಆಚರಿಸಲಾಯಿತು.

ಫಾದರ್ ಆಲ್ಪ್ರೆಡ್ ರೋಚ್ ಇವರ ಸಂತ ಪದವಿಯ ಪ್ರಕ್ರಿಯೆಗಾಗಿ ನ್ಯಾಯದ ಪ್ರಚಾರಕರಾದ ಫಾದರ್ ಸುನೀಲ್ ಕೆ ಡಿಸೋಜ ಅವರು ಪವಿತ್ರ ಬಲಿಪೂಜೆಯ ಆಚರಣೆಯ ಅಧ್ಯಕ್ಷತೆ ವಹಿಸಿದ್ದರು.

ಅಸ್ಸಿಸಿ ಪ್ರೆಸ್ ಮಂಗಳೂರು ಇದರ ನಿರ್ದೇಶಕರಾದ ಫಾದರ್ ಚೇತನ್ ಲೋಬೋ ಹೋಪ್ ಎಂಬ ವಿಷಯದ ಮೇಲೆ ದೇವರ ವಾಕ್ಯವನ್ನು ಬೋಧಿಸಿದರು, ಫಾದರ್ ಆಲ್ಫ್ರೆಡ್ ರೋಚ್ ದೇವರ ಜನರಿಗೆ ಭರವಸೆಯಾಗಿದ್ದರು ಮತ್ತು ಅದರಲ್ಲಿ ಅವರು ಜನರನ್ನು ಅವರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಜೀವನದಲ್ಲಿ ಪ್ರೇರೇಪಿಸಿದರು ಎಂದರು.

ಈ ಸಂಧರ್ಭದಲ್ಲಿ ವಿವಿಧ ಆಶ್ರಮಗಳ ಕಪುಚಿನ್ ಧರ್ಮಗುರುಗಳು, ಫಾದರ್ ಪ್ಯಾಟ್ರಿಕ್ ಕ್ರಾಸ್ತಾ, ವೈಸ್ ಪೋಸ್ಟುಲೇಟರ್ ಫಾದರ್ ಸಾಂಟಾ ಲೋಪೆಜ್, ಫಾದರ್ ಚಾರ್ಲ್ಸ್ ಫುರ್ಟಾಡೊ, ಫಾದರ್ ಮಾರ್ಕ್ ಸಲ್ಡಾನಾ, ಫಾದರ್ ಲೆನ್ಸನ್ ಲೋಬೋ, ಫಾದರ್ ರವಿ ರಾಜೇಶ್ ಸೆರಾವೊ, ಫಾದರ್ ಐವನ್, ಫಾದರ್ ಜೋಕಿಮ್ ಡಿ ಸೋಜಾ, ಫಾದರ್ ರೋಶನ್ ಮಿನೇಜಸ್ ಮತ್ತು ಫಾದರ್ ರೋಹನ್ ಲೋಬೋ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬ್ರಹ್ಮಾವರ, ಸಾಸ್ತಾನ, ಬಾರ್ಕೂರು, ಹೊನ್ನಾವರ, ಕಲ್ಯಾಣಪುರದ ಭಕ್ತಾಧಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಫಾದರ್ ರೋಹನ್ ಲೋಬೋ ಅವರು ಎಲ್ಲಾ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಫಾದರ್ ಪ್ಯಾಟ್ರಿಕ್ ಕ್ರಾಸ್ತಾ ಅವರು ನೊವೆನಾ ಕಿರುಪುಸ್ತಕವನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ನೊವೆನಾ ಪುಸ್ತಕಗಳನ್ನು ಸಂಘಟಕರು ವಿತರಿಸಿದರು.
ಇದೇ ಸಂಧರ್ಭದಲ್ಲಿ ಫಾದರ್ ಆಲ್ಫ್ರೆಡ್ ರೋಚ್ ಅವರ ಸಮಾಧಿ ಸ್ಥಳದ ಬಳಿ ಪ್ರಾರ್ಥನ ಕೂಟವನ್ನು ಕೂಡಾ ನಡೆಸಲಾಯಿತು. ಫಾದರ್ ಸಾಂತಾ ಲೋಪೆಜ್ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!