ಬಳ್ಳಾರಿ: ಬಿಸಿಲ ಝಳಕ್ಕೆ 10 ವರ್ಷದೊಳಗಿನ 20 ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು!

ಬಳ್ಳಾರಿ: ತೀವ್ರ ಬಿಸಿಲಿನ ಝಳಕ್ಕೆ ಬಳ್ಳಾರಿ ಜಿಲ್ಲೆ ತತ್ತರಿಸಿದ್ದು, ಕಳೆದ ಎರಡು ದಿನಗಳಲ್ಲಿ 10 ವರ್ಷದೊಳಗಿನ 20ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ 40ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ಕಂಡು ಬರುತ್ತಿದೆ.

ಈ ವರ್ಷ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ. ಹವಾಮಾನ ಇಲಾಖೆಯು ಕಳೆದ ವಾರ, ಬರದಿಂದಾಗಿ ತೀವ್ರ ಬಿಸಿಲ ಧಗೆ ಕಂಡುಬರುತ್ತಿರುವ ಬಳ್ಳಾರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ಬಿಸಿಗಾಳಿಯ ಎಚ್ಚರಿಕೆ ನೀಡಿತ್ತು.

ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳು ನಿರ್ಜಲೀಕರಣ, ಜ್ವರ ಮತ್ತು ವಾಂತಿಯಿಂದ ಬಳಲುತ್ತಿದ್ದಾರೆ. ಬಳ್ಳಾರಿ ಜಿಲ್ಲಾಡಳಿತವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ನಾಗರಿಕರು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ಮಧ್ಯಾಹ್ನ 1ರಿಂದ ಸಂಜೆ 4ರವರೆಗೆ ಯಾವುದೇ ರಕ್ಷಣೆಯಿಲ್ಲದೆ ನೇರ ಸೂರ್ಯನ ಬೆಳಕಿನಲ್ಲಿ ಹೊರಬರದಂತೆ ವಿನಂತಿಸಲಾಗಿದೆ.

ಕಲಬುರಗಿ: ಬೇಸಿಗೆಯ ಆಗಮನದೊಂದಿಗೆ, ದೇಶದ ಇತರ ಭಾಗಗಳೊಂದಿಗೆ ದಕ್ಷಿಣ ಭಾರತದಲ್ಲಿಯೂ ತಾಪಮಾನವು ಗಗನಕ್ಕೇರುತ್ತಿದೆ. ಭಾನುವಾರ ಕರ್ನಾಟಕದ ಕಲಬುರಗಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ.

Leave a Reply

Your email address will not be published. Required fields are marked *

error: Content is protected !!