ಎ-6 ಕಜ್ಕೆ ಶ್ರೀ ಅನ್ನಪೂರ್ಣೆಶ್ವರಿ ದೇವಸ್ಥಾನದಲ್ಲಿ ದೃಡಕಲಶ- ಮಂಡಲ ಪೂಜಾ ಮಹೋತ್ಸವ

ಕಜ್ಕೆ: ಮಹಾಮಾತೆ ಕಜ್ಕೆ ಶ್ರೀಅನ್ನಪೂರ್ಣೆಶ್ವರಿ ದೇವಸ್ಥಾನದಲ್ಲಿ ದೇವಸ್ಥಾನದ ಲೋಕಾರ್ಪಣೆ, ಮಹಾ ಕುಂಭಾಭಿಷೇಕದ 48ನೇ ದಿನದಲ್ಲಿ ನಡೆಯುವ ಧೃಡ ಕಲಶ ಹಾಗೂ ಮಂಡಲ ಪೂಜಾ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಇದೇ ಎಪ್ರಿಲ್‌ 6 ರಂದು ಶನಿವಾರ ನಡೆಯಲಿದೆ.

ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರು ನೇತ್ರತ್ವ ವಹಿಸಿ ಆಶೀರ್ವಚನ ನೀಡುವರು. ಶ್ರೀಮಠ ಮತ್ತು ಕಜ್ಕೆ ಶ್ರೀ ಅನ್ನಪೂರ್ಣೆಶ್ವರಿ ದೇವಸ್ಥಾನದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!