ಮೀನುಗಾರಿಕಾ ಕಾಲೇಜಿನಲ್ಲಿ ಉಚಿತ ತರಬೇತಿ – ಅರ್ಜಿ ಆಹ್ವಾನ

ಮಂಗಳೂರು ಅ. 20: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿ  ನವೆಂಬರ್ 3 ರಿಂದ 30 ರವರೆಗೆ ಮತ್ಸ್ಯ ಆರೋಗ್ಯ ತಪಾಸಣೆ ಮತ್ತು ಮತ್ಸ್ಯ-ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಾಗಾರ ಆಯೋಜಿಸುತ್ತಿದೆ.


ಹೈದರಾಬಾದ್‍ನಲ್ಲಿರುವ ಭಾರತ ಸರ್ಕಾರದ ರಾಷ್ಟ್ರೀಯ ಕೃಷಿಯೇತರ ವಿಸ್ತರಣೆ ನಿರ್ವಹಣಾ ಸಂಸ್ಥೆ ಮತ್ತು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಗಳ ಸಹಯೋಗದಿಂದ ಕಾರ್ಯಾಗಾರ ನಡೆಯಲಿದೆ.


ರಾಜ್ಯ/ ಕೇಂದ್ರದ ಕೃಷಿ/ ಮೀನುಗಾರಿಕೆ/ ಪಶುವೈದ್ಯಕೀಯ ವಿಶ್ವವಿದ್ಯಾಲಯಗಳು ಅಥವಾ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಕೇಂದ್ರಿಯ ಮೀನುಗಾರಿಕೆ ಶಿಕ್ಷಣ ಸಂಸ್ಥೆಯಿಂದ ಮೀನುಗಾರಿಕೆಯಲ್ಲಿ ಪದವಿ/ ರಾಜ್ಯ ಕೃಷಿ ವಿಶ್ವವಿದ್ಯಾಲಯದಿಂದ ಮೀನುಗಾರಿಕೆಯಲ್ಲಿ ಡಿಪೆÇ್ಲೀಮಾ/ ಜೀವಶಾಸ್ತ್ರದಲ್ಲಿ ಪದವಿ/ ಜಲಕೃಷಿ, ಕೈಗಾರಿಕಾ ಮೀನುಗಾರಿಕೆ, ಕಡಲ ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ.


ಉಚಿತ ಊಟ, ವಸತಿ ಹಾಗೂ ಪ್ರಯಾಣ ಭತ್ಯೆಯನ್ನು ಆಯಾ ನಿವಾಸದಿಂದ ರೂ.2000 ಕ್ಕೆ ಮೀರದಂತೆ ಪ್ರಯಾಣದ ಚೀಟಿ ಸಲ್ಲಿಕೆಯ ಮೂಲಕ ಒದಗಿಸಲಾಗುವುದು.
ಅರ್ಜಿಗಳನ್ನು ವೆಬ್ಸೈಟ್ www.cofm.edu.in ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯನ್ನು ಡೀನ್, ಮೀನುಗಾರಿಕಾ ಮಹಾವಿದ್ಯಾಲಯ, ಕಂಕನಾಡಿ ಅಂಚೆ, ಮಂಗಳೂರು-575002, ಅಥವಾ ಇಮೇಲ್ [email protected] ನಲ್ಲಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ: 0824 2248936, 99169 24084 ಸಂಪರ್ಕಿಸಲು  ಎಂದು ಪ್ರಕಟಣೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!