ಕೊಲ್ಲೂರು ದೇವಸ್ಥಾನ- ವಿದ್ಯಾರಂಭಕ್ಕೆ ಅವಕಾಶ

ಉಡುಪಿ, ಅ. 20: ಜಿಲ್ಲೆಯ ಬೈಂದೂರು ತಾಲೂಕು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಅಕ್ಟೋಬರ್ 25 ರ ವರೆಗೆ ನವರಾತ್ರಿ ಉತ್ಸವ ಜರುಗಲಿದ್ದು, ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ದೇವಾಲಯದಲ್ಲಿ ಅನುಷ್ಟಾನಗೊಳಿಸುವ ಸಲುವಾಗಿ ಅಕ್ಟೋಬರ್ 24 ರ ಮಹಾನವಮಿಯಂದು ಸಂಜೆ 5 ಗಂಟೆಯಿಂದ ಸಾರ್ವಜನಿಕರಿಗೆ ದೇವರ ದರ್ಶನವನ್ನು ನಿರ್ಭಂಧಿಸಲಾಗಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ಅಕ್ಟೋಬರ್ 25 ರ ವರೆಗೆ ನವರಾತ್ರಿ ಉತ್ಸವ ಜರುಗಲಿದ್ದು, ಸಾರ್ವಜನಿಕರ ಮತ್ತು ಕರ್ತವ್ಯ ನಿರತ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ದೇವಾಲಯದಲ್ಲಿ ಅನುಷ್ಟಾನಗೊಳಿಸುವ ಸಲುವಾಗಿ ಅಕ್ಟೋಬರ್ 24 ರ
ಮಹಾನವಮಿಯಂದು ನಡೆಯಲಿರುವ ರಥೋತ್ಸವವನ್ನು ದೇವಸ್ಥಾನದ ಆವರಣದ ಒಳಗೆ ದೇವಸ್ಥಾನದ ಅರ್ಚಕರು, ಪುರೋಹಿತರು, ಸಿಬ್ಬಂದಿಗಳು ಮಾತ್ರ ನೆರವೇರಿಸಲಿದ್ದಾರೆ.

ಅಕ್ಟೋಬರ್ 25 ರ ವಿಜಯದಶಮಿ ದಿನದಂದು ಬೆಳಗ್ಗೆ 4 ಗಂಟೆಯಿಂದ ವಿದ್ಯಾರಂಭ ಪ್ರಾರಂಭವಾಗಲಿದ್ದು, ವಿದ್ಯಾರಂಭಕ್ಕೆ ದಂಪತಿ ಸಮೇತ ಮಗುವಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!