ಮಂಗಳೂರು: ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ವಂಚನೆ- ಆರೋಪಿ ಸೆರೆ

ಮಂಗಳೂರು: ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ವಾಟ್ಸ್ಆ್ಯಪ್ ನಲ್ಲಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಲಿಂಕ್ ಕಳುಹಿಸಿ ಹಣ ಪಡೆದು ವಂಚಿಸಿದ ಆರೋಪಿಯನ್ನು ಮಂಗಳೂರು ನಗರ ಸೆನ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಜೋಧ್‌ಪುರ್ ಜಿಲ್ಲೆಯ ಬಾವುರಿಯ ಸದ್ದಾಂ ಗೌರಿ ಬಾವುರಿ (30) ಬಂಧಿತ ಆರೋಪಿ.

ರಾಜಸ್ಥಾನದ ಜೋಧ್ ಪುರ್ ಜಿಲ್ಲೆಯ ಬಾವುರಿಯಿಂದ ಆರೋಪಿಯನ್ನು ದಸ್ತಗಿರಿ ಮಾಡಿ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿ ಕೃತ್ಯಕ್ಕೆ ಬಳಸಿದ 2 ಮೊಬೈಲ್ ಫೋನ್, 8 ಡೆಬಿಟ್ ಕಾರ್ಡ್ ಗಳು, 4 ಬ್ಯಾಂಕ್ ಚೆಕ್ ಬುಕ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.

ಆರೋಪಿಯು ಸಂದೇಶ ಕಳುಹಿಸಿ ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ಲಿಂಕ್ ಕಳುಹಿಸಿ ಈ ಲಿಂಕ್ ಮುಖಾಂತರ ಹಣ ತೊಡಗಿಸಿ, ಟಾಸ್ಕ್ ಕಂಪ್ಲೀಟ್ ಮಾಡುವ ಮುಖಾಂತರ ಹಣ ಮಾಡಬಹುದು ಎಂಬುದಾಗಿ ಸಂತ್ರಸ್ತ ವ್ಯಕ್ತಿಯನ್ನು ನಂಬಿಸಿ, ಆತನಿಂದ ಒಟ್ಟು 1.15 ಲಕ್ಷ ರೂ. ಹಣ ಪಡೆದು ವಂಚಿಸಿರುವು ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.

ಅದರಂತೆ ಆರೋಪಿ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್ ಹಾಗೂ ಡಿ.ಸಿ.ಪಿ ಸಿದ್ಧಾರ್ಥ ಗೊಯಲ್ ಮಾರ್ಗದರ್ಶ ನದಂತೆ, ಸಿಸಿಆರ್‌ಬಿ ಘಟಕದ ಎಸಿಪಿ ರವೀಶ್ ನಾಯಕ್ ನೇತೃತ್ವದಲ್ಲಿ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ಯಾಮಸುಂದರ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!