ಮಂಗಳೂರು: ರಂಗಭೂಮಿ ಕಲಾವಿದರಿಗೆ ರಕ್ಷಣೆಗೆ ಆಗ್ರಹಿಸಿ ಕಾಲ್ನಡಿಗೆ ಜಾಥಾ

ಮಂಗಳೂರು: ಕಲಾವಿದರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಮತ್ತು ಅವಿಭಜಿತ ದ.ಕ.ಜಿಲ್ಲೆಯ ಸಮಸ್ತ ರಂಗಭೂಮಿ ಕಲಾವಿದರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ತುಳು ನಾಟಕ ಕಲಾವಿದರ ಒಕ್ಕೂಟ ಮಂಗಳೂರು, ಜಿಲ್ಲಾ ರಂಗಭೂಮಿ ಸಂಘದ ವೇದಿಕೆ, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಇವುಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ತನಕ ಕಾಲ್ನಡಿಗೆ ಜಾಥಾ ನಡೆಯಿತು.

ಜಾಥಾ ಆರಂಭಕ್ಕೂ ಮುನ್ನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆದ ಕಲಾವಿದರ ಸಮಾವೇಶವ ನ್ನುದ್ದೇಶಿಸಿ ಮಾತನಾ ಡಿದ ಸಿನಿ ನಟ, ನಿರ್ದೇಶಕ ಡಾ.ದೇವದಾಸ್ ಕಾಪಿಕಾಡ್, ಇಂದು ನಾವು ನಮ್ಮ ಕ್ಷೇತ್ರದ ಒಗ್ಗಟ್ಟಿಗಾಗಿ ಇಲ್ಲಿ ಕೂಡಿ ಬಂದಿದ್ದೇವೆ, ನಮ್ಮ ನಾಟಕ, ಕಿರುನಾಟಕಗಳಿಂದ ಸಮಾಜದಲ್ಲಿ ಗೌರವ ಮೂಡಿದೆ. ಆದರೆ ಇಂದು ಅದೇ ನಾಟಕ ಕಲಾವಿದರಿಗೆ ಭದ್ರತೆ ಇಲ್ಲ. ಹೇಳಿಕೆ ನೀಡಲು, ಸಂವಾದ ನಡೆಸಲು ಹೆದರುವಂತಾಗಿದೆ. ನಮ್ಮ ದೈವಗಳಲ್ಲಿ ನಂಬಿಕೆ ಯುಳ್ಳವರಾಗಿದ್ದೇವೆ ಮತ್ತು ನಾವು ಅವರನ್ನು ಪೂಜಿಸುವೆವು, ಅವುಗಳನ್ನು ತಪ್ಪಾಗಿನಿರೂಪಿಸುವುದು ನಮ್ಮ ಉದ್ದೇಶ ವಲ್ಲ. ಯಕ್ಷಗಾನವು ನಮ್ಮ ಸಂಸ್ಕೃಯ ಅವಿಭಾಜ್ಯ ಅಂಗವಾಗಿದೆ ನಮ್ಮ ಕಡೆಯಿಂದ ಏನಾದರೂ ತಪ್ಪಾಗಿದ್ದರೆ ನಮ್ಮನ್ನು ಸಂಪರ್ಕಿಸಿ, ನಟರನ್ನು ಗೌರವಿಸಬೇಕು ಎಂದು ನಾವು ವಿನಂತಿಸುತ್ತೇವೆ ಎಂದರು.

ಲಕುಮಿ ಬಳಗದ ಕಿಶೋರ ಶೆಟ್ಟಿ ಮಾತನಾಡಿ, ‘‘ಈ ಸಾಂಪ್ರದಾಯಿಕ ಮೌಲ್ಯಗಳು ನಾಟಕಗಳಿಗೆ ಯಾವತ್ತೂ ನಿರ್ಬಂಧ ಗಳಾಗಿರಲಿಲ್ಲ, ತುಳು ಭಾಷೆಗೆ ಮನ್ನಣೆ ತರುವ ಹೋರಾಟದಲ್ಲಿ ತುಳು ನಾಟಕಗಳು ಸಾಕಷ್ಟು ಕೊಡುಗೆ ನೀಡಿವೆ ಎಂದರು.

ನಟ-ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ವಿಷಾದ ವ್ಯಕ್ತಪಡಿಸಿ, ಕೌಶಲ್ಯದಿಂದ ಸರಿಯಾದ ಉತ್ತರವನ್ನು ನೀಡುವ ನಟರ ಸಂಖ್ಯೆ ಇಂದು ಬಹಳ ಕಡಿಮೆಯಾಗಿದೆ ಎಂದರು.

ಸಮಾವೇಶದ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಸರಪಾಡಿ ಅಶೋಕ್ ಶೆಟ್ಟಿ, ಕೃಷ್ಣ ಮಂಜೇಶ್ವರ, ಕೆಕೆ ಗಟ್ಟಿ, ಜಗನ್ ಪವಾರ್ ಬೇಕಲ್, ಶರತ್ ಶೆಟ್ಟಿ ಕಿನ್ನಿಗೋಳಿ, ಪವನ್ ಜೈಕಲ್, ಮಧು ಬಂಗೇರ, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!