ಹಿರಿಯಡ್ಕ: ಸಾರ್ವಜನಿಕ ರಸ್ತೆಗೆ ತಡೆಗೋಡೆ ನಿರ್ಮಿಸಿ ಸಂಚಾರಕ್ಕೆ ತಡೆ: ದೂರು ದಾಖಲು

ಹಿರಿಯಡ್ಕ: ಸಾರ್ವಜನಿಕ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ತಡೆಗೋಡೆ ನಿರ್ಮಿಸಿ ರಸ್ತೆ ನಾಶ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತಡೆಯೊಡ್ಡಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಕ್ಕೆಹಳ್ಳಿಯ ಅನಂತಪದ್ಮನಾಭ ಹಾಗೂ ಇತರರ ಮನೆಗೆ ಬರುವ ಹಾಗೂ ಕೃಷಿ ಚಟುವಟಿಕೆಗಾಗಿ ಅನಾದಿಕಾಲದಿಂದಲೂ ಉಪಯೋಗಿಸುತ್ತಿದ್ದ ಕುಕ್ಕೆಹಳ್ಳಿ-ಆತ್ರಾಡಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕುಕ್ಕೆಹಳ್ಳಿ ಗ್ರಾಮದ ಸಾರ್ವಜನಿಕರ ರಸ್ತೆಯನ್ನು ದೇವರಾಜ್ ಹಾಗೂ ಸಾವಿತ್ರಿ ಎಂಬವರು ಇತರರ ಸಹಕಾರದಿಂದ ಮಾ.9ರಂದು ತಡೆಗೋಡೆ ನಿರ್ಮಿಸಿ ರಸ್ತೆ ನಾಶ ಮಾಡಿ ಸುಗಮ ಸಂಚಾರಕ್ಕೆ ಕಾನೂನು ಬಾಹಿರವಾಗಿ ತಡೆಯೊಡ್ಡಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!