ಉಡುಪಿ: ಸಾರಿಗೆ ಇಲಾಖೆ ಅಧಿಕಾರಿ ರವಿಶಂಕರ್‌ಗೆ ಬೀಳ್ಕೊಡುಗೆ

ಉಡುಪಿ: ಸುಮಾರು ಮೂವತ್ತೆರಡು ವರ್ಷಗಳ ಕಾಲ ಸಾರಿಗೆ ಇಲಾಖೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ರವಿಶಂಕರ ಪಿ. ಅವರ ಬೀಳ್ಕೊಡುಗೆ ಸಮಾರಂಭ ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಯ ಆವರಣದಲ್ಲಿ ಸಾರಿಗೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ರವಿಶಂಕರ್, ಸರಕಾರಿ ನೌಕರರ ಜೀವನದಲ್ಲಿ ನಿವೃತ್ತಿ ಒಂದು ಅನಿವಾರ್ಯ ಕಾಲಘಟ್ಟ. ಹಿರಿಯ ಅಧಿಕಾರಿಗಳ ಸೂಕ್ತ ಹಾಗೂ ಸಮಯೋಚಿತ ಮಾರ್ಗದರ್ಶನದಿಂದ ನಾನು ಸಾಗಿದ ಹಾದಿಯಲ್ಲಿ ತೃಪ್ತಿಯನ್ನು ಕಂಡುಕೊಂಡಿದ್ದೇನೆ ಎಂದರು.

Leave a Reply

Your email address will not be published. Required fields are marked *

error: Content is protected !!