ಉಡುಪಿ ಮತ್ತು ಕಾಪು ತಾಲೂಕು ಭೂ ನ್ಯಾಯ ಮಂಡಳಿಗೆ ಸದಸ್ಯರ ನಾಮ ನಿರ್ದೇಶನ

ಉಡುಪಿ, ಫೆ.29(ಉಡುಪಿ ಟೈಮ್ಸ್ ವರದಿ) ರಾಜ್ಯ ಸರಕಾರದಿಂದ ಉಡುಪಿ ಮತ್ತು ಕಾಪು ತಾಲೂಕು ಭೂ ನ್ಯಾಯಮಂಡಳಿಗೆ ವಿವಿಧ ಸದಸ್ಯರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಗೌರಮ್ಮ ಆರ್ ಆದೇಶ ಹೊರಡಿಸಿದ್ದಾರೆ.

ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಭೂ ನ್ಯಾಯಮಂಡಳಿಗೆ ಕುಂದಾಪುರ ಉಪ ವಿಭಾಗ ಉಡುಪಿ ಜಿಲ್ಲೆಯ ಸಹಾಯಕ ಆಯುಕ್ತರನ್ನು ಅಧ್ಯಕ್ಷರನ್ನಾಗಿ, ಉಡುಪಿ ತಾಲೂಕಿನ ತಹಶೀಲ್ದಾರ ಇವರನ್ನು ಕಾರ್ಯದರ್ಶಿಯಾಗಿ ನಾಮನಿರ್ದೇಶನ ಮಾಡಿ ಆದೇಶಿಸಲಾಗಿದೆ. ಇವರಲ್ಲದೆ ಸಾಮಾನ್ಯ ಸದಸ್ಯರನ್ನಾಗಿ ಹಿರಿಯಡ್ಕದ ಚರಣ್ ವಿಠ್ಠಲ್‌ ಕುದಿ, ರೋಯ್ಸ್ ಮರ್ವಿನ್ ಫೆರ್ನಾಂಡಿಸ್ ಉದ್ಯಾವರ, ಪರ್ಕಳ ಹೆರ್ಗಾದ ಬಿ ಜಯರಾಮ ಮತ್ತು ಬಿಕೆ ಕೆಮ್ಮಣ್ಣು ರಾಜು ಇವರನ್ನು ನಾಮನಿರ್ದೇಶನ ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಕಾಪು ತಾಲೂಕು ಭೂ ನ್ಯಾಯಮಂಡಳಿಗೆ ಸರಕಾರ ರೋಹನ್ ಕುಮಾರ್ ಕುತ್ಯಾರು, ಮೆಲ್ವಿನ್ ಡಿಸೋಜಾ ಶಿರ್ವ, ರಮೀಜ್ ಹುಸೇನ್ ಪಡುಬಿದ್ರೆ ಮತ್ತು ರಾಘವ ಕೋಟ್ಯಾನ್ ಬೆಳ್ಳೆ ಇವರಲ್ಲದೆ ಕಾಪು ತಾಲೂಕು ತಹಸಿಲ್ದಾರ್ ರವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನಾಮನಿರ್ದೇಶನ ಮಾಡಿದೆ.

Leave a Reply

Your email address will not be published. Required fields are marked *

error: Content is protected !!