ಕೂಗಿದ್ದು ʼನಾಸಿರ್‌ ಸಾಬ್ ಝಿಂದಾಬಾದ್ʼ, ಮಾಧ್ಯಮಗಳಲ್ಲಿ ವರದಿಯಾಗಿದ್ದು ‘ಪಾಕಿಸ್ತಾನ್ ಝಿಂದಾಬಾದ್

ಬೆಂಗಳೂರು : ರಾಜ್ಯಸಭೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ 3 ಅಭ್ಯರ್ಥಿಗಳು ಜಯಭೇರಿ ಬಾರಿಸಿದರೆ, ಬಿಜೆಪಿಯ ಒಬ್ಬರು ರಾಜ್ಯಸಭೆ ಪ್ರವೇಶಿಸಿದರು. ಮೈತ್ರಿ ಅಭ್ಯರ್ಥಿಗೆ ಸೋಲಾಗಿದೆ. ಗೆಲುವಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗರು ಸಂಭ್ರಮಾಚರಣೆ ವೇಳೆ ʼಪಾಕಿಸ್ತಾನ್‌ ಝಿಂದಾಬಾದ್ʼ ಘೋಷಣೆ ಕೂಗಿದ್ದಾರೆ ಎಂದು ಟಿವಿ ಚಾನಲ್‌ ಗಳು ವರದಿ ಮಾಡಿದ್ದವು. ಆದರೆ ವೀಡಿಯೊ ಕೂಲಂಕುಷವಾಗಿ ಪರಿಶೀಲಿಸಿದಾಗ ಸ್ವಷ್ಟವಾಗಿ ‘ನಾಸೀರ್ ಸಾಬ್ ಝಿಂದಾಬಾದ್’ ಎಂದು ಹೇಳುತ್ತಿರುವುದು ಕೇಳಿಸುತ್ತಿದೆ.

ಇದನ್ನೂ ಓದಿ ಜನಾರ್ದನ ರೆಡ್ಡಿ – ಸಿದ್ದರಾಮಯ್ಯ ಭೇಟಿ | “ಪರಸ್ಪರ ತೊಡೆ – ತೋಳು ತಟ್ಟಿಕೊಂಡವರು, ಈಗ ಪುಷ್ಪಗುಚ್ಛದ ಮನವಿ” ಎಂದು ಪೋಸ್ಟ್ ಮಾಡಿದ್ದ ಶಾಸಕ ಸುರೇಶ್ ಕುಮಾರ್

ಕನ್ನಡದ ಹೆಚ್ಚಿನ ಸುದ್ದಿ ಮಾಧ್ಯಮಗಳು ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿವೆ.

“ನಾಸಿರ್‌ ಹುಸೇನ್‌ ಅವರ ಪಕ್ಕದಲ್ಲೇ ಇದ್ದ ವ್ಯಕ್ತಿ ಪಾಕಿಸ್ತಾನ್‌ ಝಿಂದಾಬಾದ್, ಪಾಕಿಸ್ತಾನ್‌ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಪಕ್ಕದಲ್ಲಿದ್ದ ಕೆಲ ಕಾರ್ಯಕರ್ತರು ಆತನ ಬಾಯಿಮುಚ್ಚಿಸಿರುವ ವಿಡಿಯೋ ವೈರಲ್‌ ಆಗಿದೆ” ಎಂದು ಟಿವಿ ಚಾನಲ್‌ ಗಳು ಸುಳ್ಳು ಸುದ್ದಿ ಹರಡಿವೆ. ಜೊತೆಗೆ ಬಿಜೆಪಿ ನಾಯಕರಿಂದ ಪ್ರತಿಕ್ರಿಯೆಯನ್ನೂ ಕೇಳಿವೆ. ಬಿಜೆಪಿ ನಾಯಕರು ವಿಧಾನ ಸೌಧ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

1 thought on “ಕೂಗಿದ್ದು ʼನಾಸಿರ್‌ ಸಾಬ್ ಝಿಂದಾಬಾದ್ʼ, ಮಾಧ್ಯಮಗಳಲ್ಲಿ ವರದಿಯಾಗಿದ್ದು ‘ಪಾಕಿಸ್ತಾನ್ ಝಿಂದಾಬಾದ್

  1. Better get your ear tested. On live channels all of us heard “jindabad jindabad, pakistan jindabad”. Don’t glorify lies.

Leave a Reply

Your email address will not be published. Required fields are marked *

error: Content is protected !!