ಗ್ಯಾರೇಜ್ ಕಾರ್ಮಿಕರ ಸಮಸ್ಯೆಗಳಿಗೆ ಧನಾತ್ಮಕ ಸ್ಪಂದನೆ: ಯಶ್ಪಾಲ್ ಸುವರ್ಣ

ಉಡುಪಿ: ಜಾಗತೀಕರಣದ ಇಂದಿನ ವಾತಾವರಣದಲ್ಲಿ ಗ್ಯಾರೇಜ್ ಮಾಲಕರು ಮತ್ತು ಕಾರ್ಮಿಕರು ಸವಾಲಿನ ಪರಿಸ್ಥಿತಿಯಲ್ಲಿ ವೃತ್ತಿಯನ್ನು ನಡೆಸುತ್ತಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ದೊರಕುವ ಸರಕಾರಿ ಸೌಲಭ್ಯತೆಗಳ ಮಾಹಿತಿಯ ಕೊರತೆಯಿಂದ ಅವುಗಳಿಂದ ಅವರು ವಂಚಿತರಾಗಿದ್ದಾರೆ. ಅಸಂಘಟಿತ ವರ್ಗಕ್ಕೆ ದೊರಕುವ ಎಲ್ಲಾ ಸೌಲಭ್ಯತೆಗಳನ್ನು ಗ್ಯಾರೇಜ್ ಕಾರ್ಮಿಕರಿಗೆ ದೊರಕಿಸುವ ನಿಟ್ಟಿನಲ್ಲಿ ಓರ್ವ ಜನಪ್ರತಿನಿಧಿಯಾಗಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಉಡುಪಿಯ ಶಾಸಕರಾದ ಯಶ್ ಪಾಲ್ ಸುವರ್ಣ ರವರು ನುಡಿದರು.

ಅವರು ಭಾನುವಾರ ಉಡುಪಿಯ ಬೈಲೂರಿನ ಆಶಾನಿಲಯದಲ್ಲಿ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ವಾರ್ಷಿಕ ಮಹಾಸಭೆ ಮತ್ತು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ ಆರ್ ರವರು ಕಾರ್ಮಿಕ ಇಲಾಖೆಯ ನಿಯಮ ನಿಬಂಧನೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಮಾವೇಶದಲ್ಲಿ ಸಂಜೀವ ದೇವಾಡಿಗ ಬೈಂದೂರು, ಆನಂದ್ ಸೇರಿಗಾರ್ ದೊಡ್ಡಣ್ಣಗುಡ್ಡೆ ಮತ್ತು ರಾಘವೇಂದ್ರ ಆಚಾರ್ಯ ಆದಿಉಡುಪಿ, ಇವರನ್ನು ಸನ್ಮಾನಿಸಲಾಯಿತು.

ಸಂಘದ ವತಿಯಿಂದ ಆಶಾ ನಿಲಯದ ವಿಕಲಚೇತನ ಮಕ್ಕಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

ಸಂಘದ ಸದಸ್ಯರಿಗೆ ನೂತನವಾಗಿ ನವೀಕರಿಸಿದ ಗುರುತು ಚೀಟಿ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶ್ರೀ ಕೃಷ್ಣ ಮಠದ ವಕ್ತಾರರಾದ ಉಲ್ಲಾಸ್ ಕುಲಕರ್ಣಿ, ಉಡುಪಿ ಕ್ಲಾಸಿಕ್ ಆಟೋಮೋಬೈಲ್ ನ ಆಡಳಿತ ನಿರ್ದೇಶಕರಾದ ಸಂತೋಷ್ ಕುಮಾರ್, ವಿಮಾ ವಕ್ತಾರ ರವೀಂದ್ರ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಮಂಗಳೂರಿನ ಮಾಜಿ ಅಧ್ಯಕ್ಷರಾದ ದಿನೇಶ್ ಕುಮಾರ್, ಪದಾಧಿಕಾರಿಗಳಾದ ದಿನೇಶ್ ಬಂಗೇರ, ಎಂ ನಾರಾಯಣ್, ತಾಲೂಕು ಅಧ್ಯಕ್ಷರುಗಳಾದ ನಾರಾಯಣ ಆಚಾರ್ ಕುಂದಾಪುರ, ಕೃಷ್ಣಯ್ಯ ಮದ್ದೋಡಿ ಬೈಂದೂರು, ನಾರಾಯಣ ಪೂಜಾರಿ ಬ್ರಹ್ಮಾವರ, ಅಬ್ದುಲ್ ಹಮೀದ್ ಕಾರ್ಕಳ, ಗೌರವ ಸಲಹೆಗಾರರಾದ ಪ್ರಭಾಕರ್ ಕೆ, ಯಾದವ ಶೆಟ್ಟಿಗಾರ್, ಉದಯ್ ಕಿರಣ್, ಜಯ ಸುವರ್ಣ, ಉಪಾಧ್ಯಕ್ಷರಾದ ರಾಜೇಶ್ ಜತ್ತನ್, ವಿನಯ್ ಕುಮಾರ್ ಕಲ್ಮಾಡಿ, ಕೋಶಾಧಿಕಾರಿ ಸಂತೋಷ್ ಕುಮಾರ್, ಕ್ರೀಡಾ ಕಾರ್ಯದರ್ಶಿ ಮಧುಸೂದನ್ ಕನ್ನರ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಣಿಪಾಲ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ಕುಮಾರ್ ಸ್ವಾಗತಿಸಿ ವಿನಯ್ ಕುಮಾರ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!