ತುಳು ಸಂಸ್ಕೃತಿ ನೆಲದ ಶ್ರೀಮಂತಿಕೆಯ ಗುರುತು: ಡಿಸಿ ಡಾ.ವಿದ್ಯಾಕುಮಾರಿ

ಉಡುಪಿ: ತುಳು ಭಾಷೆ ಮತ್ತು ಸಂಸ್ಕೃತಿ ಈ ನೆಲದ ಶ್ರೀಮಂತಿಕೆಯ ಗುರುತಾಗಿದೆ. ತುಳು ಸಂಸ್ಕೃತಿಯ ಆಚಾರ, ವಿಚಾರಗಳು ಮುಂದಿನ ಪೀಳಿಗೆಗೂ ತಲುಪಬೇಕು. ಅದನ್ನು ಉಳಿಸಿ ಮುನ್ನಡೆಸಿಕೊಂಡು ಹೋಗುವ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ತುಳುಕೂಟ ಉಡುಪಿ ವತಿಯಿಂದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಲಯನ್ಸ್ ಕ್ಲಬ್ ಉಡುಪಿ ಅಮೃತ್ ಸಂಯುಕ್ತ ಆಶ್ರಯದಲ್ಲಿ ರವಿವಾರ ಉಡುಪಿ ಕ್ರಿಶ್ಚಿಯನ್ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ‘ತುಳುವರೆ ಗೊಬ್ಬುಲು’ ಕಾರ್ಯಕ್ರಮವನ್ನು ಗೇರುಬೀಜದ ಆಟ ಆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಎಚ್‌ಪಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ಅಧ್ಯಕ್ಷ ಹರಿಪ್ರಸಾದ್ ರೈ, ಸಾಫಲ್ಯ ಟ್ರಸ್ಟ್ ಪ್ರವರ್ತಕ ನಿರುಪಮಾ ಪ್ರಸಾದ್ ಶೆಟ್ಟಿ, ಉದ್ಯಮಿ ಕೆ.ಸತ್ಯೇಂದ್ರ ಪೈ, ಲಯನ್ಸ್ ಕ್ಲಬ್ ಉಡುಪಿ ಅಮೃತ್ ಅಧ್ಯಕ್ಷೆ ಭಾರತಿ ಹರೀಶ್ ಸುವರ್ಣ, ಕ್ರಿಶ್ಚಿಯನ್ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಜ್ಯೋಯಿಲಿನ್ ಪರಿಮಳ ಕರ್ಕಡ, ತುಳುಕೂಟ ಕೋಶಾಧಿಕಾರಿ ಎಂ.ಜಿ. ಚೈತನ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕ್ರೀಡಾ ಸಾಧಕರಾದ ನಿಧಿ ಎಂ.ಶೆಟ್ಟಿ ಹಾಗೂ ಸಿಂಚನಾ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ತುಳುಕೂಟ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯ ಕ್ರಮ ಸಂಚಾಲಕ ಮುಹಮ್ಮದ್ ಮೌಲಾ ಸ್ವಾಗತಿಸಿದರು. ಕಾರ್ಯದರ್ಶಿ ಗಂಗಾಧರ್ ಕಿದಿಯೂರು ವಂದಿಸಿದರು. ಶ್ರೇರಾಶ್ ಕುಲಾಲ್ ಕುತ್ಯಾರು ಕಾರ್ಯಕ್ರಮ ನಿರೂಪಿಸಿದರು.

ಗಮನ ಸೆಳೆದ ತುಳುವೆರ ಗೊಬ್ಬು

ಗುಂಪು ವಿಭಾಗದಲ್ಲಿ ಪುರುಷರಿಗೆ ಲಗೋರಿ, ಹಗ್ಗಜಗ್ಗಾಟ, ಗೇರುಬೀಜ ದಾಟ, ಮಹಿಳೆಯರಿಗೆ ಸೊಪ್ಪಾಟ, ಹಗ್ಗಜಗ್ಗಾಟ, ಗೇರುಬೀಜದಾಟ, ವೈಯಕ್ತಿಕ ವಿಭಾಗದಲ್ಲಿ ಪುರುಷರಿಗೆ ಗುಂಟದಗೊಬ್ಬು, ಮಡಕೆ ಒಡೆಯುವುದು, ತೆಂಗಿನಕಾಯಿ ಅಂಕ, ಮಹಿಳೆಯರಿಗೆ ಗುಂಟದ ಗೊಬ್ಬು, ಮಡಕೆ ಒಡೆಯುವುದು, ತೆಂಗಿನಗರಿ ಹೆಣೆಯುವ ಸ್ಪರ್ಧೆಗಳು ಗಮನ ಸೆಳೆದವು. ಅದೇ ರೀತಿ ತುಳುಕೂಟ ಸದಸ್ಯರಿಗೆ ನಿಧಿ ಶೋಧ, ತುಳು ರಸಪ್ರಶ್ನೆ ಸ್ಪರ್ಧೆಗಳು ನಡೆದವು.

Leave a Reply

Your email address will not be published. Required fields are marked *

error: Content is protected !!