ಫೆ.11 ಅತ್ತೂರು ಪರ್ಪಲೆ ಗಿರಿ ಧರ್ಮ ದೈವಗಳ ಶಿಲಾಮಯ ಗುಡಿಗಳ ಶಿಲನ್ಯಾಸ

ಕಾರ್ಕಳ: ಕಾರ್ಕಳ ತಾಲೂಕಿನ ಅತ್ತೂರು ಶ್ರೀ ಕ್ಷೇತ್ರ ಪರ್ಪಲೆಗಿರಿಯಲ್ಲಿ ಕಲ್ಕುಡ , ಕಲ್ಲುರ್ಟಿ, ತೂಕತ್ತೇರಿ ಧರ್ಮದೈವಗಳ ಶಿಲಾಮಯ ಗುಡಿಗಳ ಶಿಲಾನ್ಯಾಸ ಕಾರ್ಯಕ್ರಮವು ಫೆ.11 ರವಿವಾರ ಪೂರ್ವಾಹ್ನ 9.58ಕ್ಕೆ ಅತ್ತೂರು ಶ್ರೀ ಕ್ಷೇತ್ರ ಪರ್ಪಲೆಗಿರಿಯಲ್ಲಿ ನಡೆಯಲಿದೆ ಎಂದು ಅತ್ತೂರು ಪರ್ಪಲೆಗಿರಿ ಪುನರುತ್ಥಾನದ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು ಅವರು ಕಾರ್ಕಳ ಪ್ರಕಾಶ್ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶ್ರೀ ಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಸರಸ್ವತಿ ಪೀಠದ ಉಡುಪಿಯ ಪೀಠಾಧಿಪತಿಗಳದ ಕಾಳಹಸ್ತೇಂದ್ರ ಮಹಾಸ್ವಾಮೀಜಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು. ತುಳುನಾಡಿನ ಪಾರ್ದನಗಳಲ್ಲಿ ಹಾಗೂ ಅಷ್ಟಮಂಗಲ ಪ್ರಶ್ನಾ ಚಿಂತನೆಗಳ ಮೂಲಕ ಈ ಪುಣ್ಯ ಭೂಮಿಯಲ್ಲಿ ದೇವಾಲಯ ಹಾಗೂ ಗುಡಿ ಗೋಪುರಗಳ ನಿರ್ಮಾಣ ಬಗೆಗಿನ ಮಾಹಿತಿ ಹಾಗೂ ಅವಶ್ಯಕತೆ ತಿಳಿದು ಬಂದಿದೆ

ಇದರ ಬೆನ್ನಲ್ಲೇ ಟ್ರಸ್ಟ್ ನಿರ್ಮಾಣ ಗೊಂಡಿದ್ದು, ಊರವರ ,ದಾನಿಗಳ ಸಹಕಾರದಿಂದ ಮೊದಲ ಹಂತದಲ್ಲಿ‌ ಶಿಲಾಮಯ ಕಲ್ಕುಡ ಕಲ್ಲುರ್ಟಿ, ತೂಕತ್ತೇರಿ ಧರ್ಮದೈವಗಳ ಗುಡಿಯ ಶಿಲಾನ್ಯಾಸ ನೆರವೇರಲಿದೆ. ಎರಡನೇ ಹಂತದಲ್ಲಿ ಗೌರಿ ಶಂಕರ ದೇವಾಲಯವು ನಿರ್ಮಾಣ ಗೊಳ್ಳಲಿದ್ದು ರೂಪುರೇಷೆ ಗಳು ಸಿದ್ಧವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅತ್ತೂರು ಕೃಷ್ಣ ಗಿರಿ ಕಲ್ಕುಡ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಪ್ರಶಾಂತ ನಾಯಕ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಕೋಶಾಧಿಕಾರಿ ನಿತ್ಯಾನಂದ ಪೈ ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!