ಉಡುಪಿ ಜಯಲಕ್ಷ್ಮೀ ಸಿಲ್ಕ್ಸ್ ಸಂಸ್ಥೆಯಲ್ಲಿ “ರವಿಕೆ ಪ್ರಸಂಗ” ಚಿತ್ರ ತಂಡ
ಉಡುಪಿ: ಫೆಬ್ರವರಿ 16ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ಸಂತೋಷ್ ಕೊಡಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಸಿನಿಮಾದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು, ಮಂಗಳೂರಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ಕರಾವಳಿ ಲೇಖಕಿಯರ ಸಂಘ ಮತ್ತು ಉಡುಪಿಯಲ್ಲಿ ಜಯಲಕ್ಷ್ಮೀ ಸಿಲ್ಕ್ಸ್ ಸಂಸ್ಥೆಯಲ್ಲಿ ಮಹಿಳಾ ನೌಕರರೊಂದಿಗೆ ಸಂವಾದ ನಡೆಸಿದರು.
ರವಿಕೆ ಪ್ರಸಂಗ ಚಿತ್ರತಂಡ ಜಯಲಕ್ಷ್ಮೀ ಸಿಲ್ಕ್ ಸಂಸ್ಥೆಯಲ್ಲಿ ಸುಮಾರು ಹೊತ್ತು ಕಾಲ ಕಳೆದರು. ಸಂಸ್ಥೆಯ ಮಾಲಕರಾದ ವೀರೇಂದ್ರ ಹೆಗ್ಗಡೆ ಅವರು ಜೊತೆಯಲ್ಲಿದ್ದು ಸಿನಿಮಾ ತಂಡಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಚಿತ್ರದ ಮುಖ್ಯ ಪಾತ್ರಧಾರಿ ಗೀತಾ ಭಟ್, ನಿರ್ದೇಶಕ ಸಂತೋಷ್ ಕೊಡಂಕೇರಿ, ಸಂಭಾಷಣೆ ಬರೆದಿರುವ ಪಾವನಾ ಸಂತೋಷ್, ರಘು ಪಾಂಡೇಶ್ವರ್, ರಕ್ಷಕ್ ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ನಡೆದ ಸಂವಾದದಲ್ಲಿ ಮಹಿಳಾ ಒಕ್ಕೂಟದ ಅಧ್ಯೆಕ್ಷೆ ವಿಜಯಲಕ್ಷ್ಮೀ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿಯ ಮಾಜೀ ಸದಸ್ಯೆ ರೂಪಕಲಾ ಆಳ್ವ, ಟ್ರಾಫಿಕ್ ಕಮೀಷನರ್ ಗೀತಾ ಕುಲಕರ್ಣಿ ಮೊದಲಾದವರು ಭಾಗವಹಿಸಿದ್ದರು.