ಉಡುಪಿ: ಹೆಸರಾಂತ ಇ.ಎನ್.ಟಿ ತಜ್ಞ ಡಾ. ಗೋಪಾಲ ಕೃಷ್ಣ ಹೊಳ್ಳ ಸೇವೆಗೆ ಲಭ್ಯ

ಉಡುಪಿ ಫೆ.8(ಉಡುಪಿ ಟೈಮ್ಸ್ ವರದಿ): ಪ್ರಸಿದ್ಧ ಕಿವಿ, ಮೂಗು, ಗಂಟಲು (ಇ.ಎನ್.ಟಿ) ತಜ್ಞ ಡಾ. ಗೋಪಾಲಕೃಷ್ಣ ಹೊಳ್ಳ ಅವರು ನಗರದಲ್ಲಿ ರೋಗಿಗಳ ಸೇವೆಗೆ ಲಭ್ಯವಿರುತ್ತಾರೆ.

ಇವರು ಕೇಂದ್ರ ಸರಕಾರದ ಸೇವೆಯ ಮಾಜಿ ಹಿರಿಯ ಇ.ಎನ್.ಟಿ ಸಲಹೆಗಾರರಾಗಿದ್ದರು. ಇವರು 2023 ರ ನ.7 ರಿಂದ ಉಡುಪಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಉಡುಪಿಯ ಕೋರ್ಟ್ ಹಿಂಬದಿ ರಸ್ತೆಯ ಮೆಡಿಕಲ್ ಸೆಂಟರ್ ನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಗೂ ಸಂಜೆ 5:00 ಯಿಂದ ರಾತ್ರಿ 7 ಗಂಟೆವರೆಗೆ ಮೆಡಿಕಲ್ ಸೆಂಟರ್‌ನಲ್ಲಿ ಸೇವೆಗೆ ಲಭ್ಯವಿರುತ್ತಾರೆ.

ಮೈಸೂರಿನಲ್ಲಿ ಎಂಬಿಬಿಎಸ್ ಹಾಗೂ ಬೆಂಗಳೂರಿನಲ್ಲಿ ಡಿ.ಎಲ್.ಒ ಪದವಿ ಪಡೆದಿರುವ ಇವರು ಪರಿಣಿತ ಹಿರಿಯ ಗಂಟಲು, ಕಿವಿ, ಮೂಗು ತಜ್ಞರಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 0820-2531221, 9424938184 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!