ಚುನಾವಣಾ ಪ್ರಣಾಳಿಕೆ ಆಧರಿತ ಬಜೆಟ್- ಪ್ರೊ. ಸುರೇಂದ್ರನಾಥ ಶೆಟ್ಟಿ

ಉಡುಪಿ: ಅಥ೯ ಸಚಿವೆ ಅವರು ಒಂದು ಘಂಟೆಗಳ ಕಾಲ ಲೇೂಕ ಸಭೆಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ಮೊದಲ ಅಧ೯ ಅವಧಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ತನ್ನ ಮೊದಲ ಹತ್ತು ವರುಷದ ಅವಧಿಯಲ್ಲಿ ಸಾಧಿಸಿದ ಪ್ರಮುಖ ವಿಷಯಗಳ ಪ್ರಸ್ತಾವನೆ ಮಾಡಿದರು ಹಾಗೇ ಉಳಿದ ಅಧ೯ ಘಂಟೆಯ ಅವಧಿಯಲ್ಲಿ ತಾವು ಮಂದೇನು ಮಾಡುತ್ತೇವೆ ಅನ್ನುವುದರ ಕುರಿತಾಗಿ ಭರವಸೆಯ ಮಾತುಗಳನ್ನು ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದರು.ಇದು ಮಧ್ಯಂತರ ಆಯ ವ್ಯಯ ಪಟ್ಟಿ ಯಾದ ಕಾರಣ ಎಲ್ಲಿಯೂ ನಿಖರವಾದ ಹಣ ಕಾಸಿನ ಲೆಕ್ಕಾಚಾರವೇ ಇರಲಿಲ್ಲ ಅನ್ನುವುದನ್ನು ಪ್ರಮುಖವಾಗಿ ಪರಿಗಣಿಸ ಬೇಕಾದ ವಿಚಾರ.

ಸಭ್‌ಕಾ ಸಾತ್ ಸಭ್‌ಕ ವಿಕಾಸ್ ಸಭ್‌ಕ ವಿಶ್ವಾಸ. ಅನ್ನುವ ಮಾತಿನೊಂದಿಗೆ ಪ್ರಾರಂಭಿಸಿದ ಬಜೆಟ್ ಭಾಷಣದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿ ಅನುಷ್ಠಾನಕ್ಕೆ ಮುಂದಾದ ಗ್ಯಾರಂಟಿ ಸ್ಕೀಮ್ ಗಳಿಗೆ ಪ್ರತಿ ಉತ್ತರವಾಗಿ ಮುಂದಿನ ಅವಧಿಯಲ್ಲಿ ರಾಷ್ಟ್ರದ 3 ಕೇೂಟಿ ಮನೆಗಳಿಗೆ ಸೌರ ವಿದ್ಯುತ್‌ ಯೇೂಜನೆ ರೂಪಿಸಿ ಉಚಿತವಾಗಿ ನೀಡುತ್ತೇವೆ ಅನ್ನುವ ಭರವಸೆಯನ್ನು ಈ ಬಜೆಟ್ನಲ್ಲಿ ಬಿಂಬಿಸಲಾಯಿತು. ಮಾತ್ರವಲ್ಲ ಯುವ ಶಕ್ತಿ ನಾರಿ ಶಕ್ತಿ ಕಿಸಾನ್ ಶಕ್ತಿ ಮತ್ತು ಗರೀಬಿ ಹಠಾವೊ ಪರವಾಗಿ ನಿಲ್ಲುವ ಯೇೂಜನೆಗಳ ಅನುಷ್ಠಾನದ ಭರವಸೆ ನೀಡಿದ ಬಜೆಟ್ ಇದ್ದಾಗಿತ್ತು..ಬಿಟ್ಟರೆ ಇದಕ್ಕೆ ಎಲ್ಲಿಂದ ಹಣ ಸಂಗ್ರಹಿಸುತ್ತೇವೆ ಅನ್ನುವ ಕುರಿತಾಗಿ ಯಾವುದೇ ಲೆಕ್ಕ ಪತ್ರ ಮುಂದಿಡಲೇ ಇಲ್ಲ.

ಹಾಗಾಗಿ ಇದೊಂದು ಹಣಕಾಸಿನ ಲೆಕ್ಕಾಚಾರದ ನಿಖರತೆಯ ಇಲ್ಲದ ಭರವಸೆ ಭಾಷಣವೆಂದು ಕರೆಯ ಬಹುದಾದ ಬಜೆಟ್. ಚುನಾವಣೆಗೆ ಮೂರು ನಾಲ್ಕು ತಿಂಗಳ ಮೊದಲು ಮಂಡಿಸಿದ ಬಜೆಟ್ ಇದಾದ ಕಾರಣ ಬಜೆಟ್ ಪಕ್ಷದ ಪ್ರಣಾಳಿಕೆಯ ರುಾಪದಲ್ಲಿ ಪ್ರಕಟಗೊಂಡಿದೆ ಅನ್ನುವುದು ನನ್ನ ಅನಿಸಿಕೆ.

ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ. ರಾಜಕೀಯ ಆಥಿ೯ಕ ವಿಶ್ಲೇಷಕರು.

Leave a Reply

Your email address will not be published. Required fields are marked *

error: Content is protected !!