ಕಿದಿಯೂರು ಶ್ರೀನಾಗ ಸನ್ನಿಧಿ- ಇಂದು ಅಷ್ಟಪವಿತ್ರ ನಾಗಮಂಡಲೋತ್ಸವ

ಉಡುಪಿ: ಕಳೆದ ಐದು ದಿನಗಳಿಂದ ನಡೆಯುತ್ತಿರುವ ಕಿದಿಯೂರು ಹೊಟೇಲ್‌ನ ಕಾರಣಿಕದ ನಾಗ ಸನ್ನಿಧಿಯಲ್ಲಿ ಇಂದು ಸಂಜೆ ನಡೆಯುವ ಅಷ್ಟಪವಿತ್ರ ನಾಗಮಂಡಲೋತ್ಸವ ಹಾಗೂ ಮಧ್ಯಾಹ್ನ ನಡೆಯುವ ಮಹಾ ಅನ್ನಸಂತರ್ಪಣೆಯೊಂದಿಗೆ ತೆರೆ ಬಿಳಲಿದೆ.

ಜ.31ರ ಬೆಳಿಗ್ಗೆ 9.45 ರಿಂದ ಶ್ರೀ ನಾಗಸನ್ನಿಧಿಯಲ್ಲಿ ಅಷ್ಟೋತ್ತರ ಶತಕಲಶಾಭಿಷೇಕ ಬಳಿಗೆ 10 ರಿಂದ 10:30 ವರೆಗೆ ಬ್ರಹ್ಮ ಕುಂಭಾಭಿಷೇಕ ಹಾಗೂ ಮಹಾಪೂಜೆ, ಶ್ರೀ ನಾಗದೇವರ ದರ್ಶನ ಸೇವೆ ಹಾಗೂ ಕಾಶಿ ವಾರಣಾಸಿ ಅವರಿಂದ ತರಿಸಲಾದ ಪವಿತ್ರ ಗಂಗಾಜಲವನ್ನು ಭಕ್ತರಿಗೆ ಸಂಪ್ರೋಕ್ಷಣೆ ಮತ್ತು ದಾರ ವಿತರಣೆ ಹಾಗೂ ಪಲ್ಲಪೂಜೆ ನಡೆಯಲಿದೆ.

ಬೆಳಗ್ಗೆ 11 ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, 4.30ಕ್ಕೆ ಹಾಲ್ಹಿಟ್ಟು ಸೇವೆ ಸಂಜೆ, ಸಂಜೆ 5:30 ರಿಂದ ನಾಗಮಂಡಲ ನಡೆಯುವ ಮಂಟಪದಲ್ಲಿ ಗಂಗಾರತಿ, ಸಂಜೆ 6:30 ರಿಂದ ಅಷ್ಟ ಪವಿತ್ರ ನಾಗಮಂಡಲೋತ್ಸವ ಆರಂಭವಾಗಲಿದೆ.

ರಾತ್ರಿ 11:30 ಕ್ಕೆ ಶ್ರೀ ವಿಶ್ವೇಶ್ವರ ತೀರ್ಥ ಮಂಟಪದಲ್ಲಿ ಶ್ರೀ ದೇವರ ಪ್ರಸಾದ ವಿತರಣೆ ನಡೆಯಲಿದೆ. ಈ ನಡುವೆ ಬೆಳಿಗ್ಗೆ 10.30 ರಿಂದ 12:30 ತನಕ ವಿದುಷಿ ಪವನ ಬಿ ಆಚಾರ್ ಮಣಿಪಾಲ ಇವರ ನಿರ್ದೇಶನದಲ್ಲಿ ಶತವೀಣಾ ವಾದನ ವಿಶೇಷ ಕಾರ್ಯಕ್ರಮ ಏಕಕಾಲದಲ್ಲಿ 108 ವೀಣಾವಾದ ನಡೆಯಲಿದೆ. ಮಧ್ಯಾಹ್ನ 12:30 ರಿಂದ 2:30ರ ವರೆಗೆ ಅಕ್ಷತಾ ದೇವಾಡಿಗ ಮತ್ತು ಬಳಗ ಅಲೆವೂರು ಇವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ.

ಮಧ್ಯಾಹ್ನ 3 ಗಂಟೆಯಿಂದ ಶ್ರೀ ಲಕ್ಷ್ಮಿ ನಾರಾಯಣ ಉಪಾಧ್ಯಾಯ ಪಾಡಿಗಾರು ಮತ್ತು ಬಳಗದವರಿಂದ ಭಕ್ತಿ ರಸಾಯನ ನಡೆಯಲಿದೆ. ಬೋರ್ಡ್ ಹೈ ಸ್ಕೂಲ್, ಮೈದಾನದಲ್ಲಿ ಹಾಕಲಾಗಿರುವ ಶ್ರೀ ವಾಸುಕಿ ಮಂಟಪದಲ್ಲಿ ಬೆಳಿಗ್ಗೆ 10.30 ರಿಂದ 12:30 ವರೆಗೆ ಶ್ರುತಿ ಮ್ಯೂಸಿಕ್ ಎರ್ಮಾಲು ಬಡ ಇವರಿಂದ ಚಂದ್ರಶೇಖರ ಸುವರ್ಣ ಇವರ ಭಕ್ತಿ ಭಾವ ಜನಪದ ಸಂಗೀತ ವೈಭವ ಹಾಗೂ ಮಧ್ಯಾಹ್ನ 1:30 ರಿಂದ 3.30 ರವರೆಗೆ ಜಗದೀಶ್ ಪುತ್ತೂರು ಮತ್ತು ಬಳಗದವರಿಂದ ಭಕ್ತಿ ಗಾನಾಮೃತ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!