ಕುಂದಾಪುರ: ಫೆ.2 ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆ ಶಾಲಾ ವಾರ್ಷಿಕೋತ್ಸವ

ಕುಂದಾಪುರ: ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆ ವಿದ್ಯಾಸಂಸ್ಥೆಯಲ್ಲಿ ಫೆಬ್ರವರಿ 2ರಂದು ಶಾಲಾ ವಾರ್ಷಿಕೋತ್ಸವ ಸಮಾರಂಜರುಗಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯವರಾಗಿ ಬರಹಗಾರ್ತಿ ಮತ್ತು ವಾಗ್ಮಿ ಪೂರ್ಣಿಮಾ ಭಟ್ ಕಮಲಶಿಲೆ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷರಾಗಿ ಐಎಂಜೆ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸಿದ್ದಾರ್ಥ್ ಜೆ ಶೆಟ್ಟಿಯವರು ಉಪಸ್ಥಿತರಿರುತ್ತಾರೆ.

ಮಕ್ಕಳ ಮುಂದಿನ ಶೈಕ್ಷಣಿಕ ವರ್ಷದ ಪದೋನ್ನತಿ ಕಾರ್ಯಕ್ರಮದೊಂದಿಗೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವೂ ಇರುತ್ತದೆ. ಕಾರ್ಯಕ್ರಮದಲ್ಲಿ ವಿದ್ಯಾ ಅಕಾಡೆಮಿ ಸಂಸ್ಥೆಯ ಆಡಳಿತ ಮಂಡಳಿ, ನಿರ್ದೇಶಕರು ಅಧ್ಯಾಪಕಿಯರು, ಬೋಧಕೇತರ ವೃಂದ, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಭಾಗವಹಿಸುವರು.

Leave a Reply

Your email address will not be published. Required fields are marked *

error: Content is protected !!