ಬಂಟ್ವಾಳ: ಒಣಹುಲ್ಲಿಗೆ ಬೆಂಕಿ ಇಡಲು ಹೋದ ಪತಿ-ಪತ್ನಿ ಸಜೀಹ ದಹನ

ಬಂಟ್ವಾಳ: ಗುಡ್ಡವೊಂದರಲ್ಲಿ ಹುಲ್ಲುಗಾವಲಿಗೆ ಬೆಂಕಿ ಕೊಡಲು ಹೋದ ಪತಿ ಪತ್ನಿ ಇಬ್ಬರೂ ಸಜೀಹ ದಹನಗೊಂಡ ಘಟನೆ ಬಂಟ್ವಾಳದ ಲೋರೆಟ್ಟೋ ಸಮೀಪದ ತುಂಡು ಪದವು ಎಂಬಲ್ಲಿ ಇಂದು ಮಧಾಹ್ನ ವೇಳೆ ನಡೆದಿದೆ.

ಇಲ್ಲಿನ ತುಂಡುಪದವು ನಿವಾಸಿ ಕ್ರಿಸ್ಟಿನ್ ಕಾರ್ಲೋ (51) ಹಾಗೂ ಗಿಲ್ಬರ್ಟ್ ಕಾರ್ಲೊ (65) ಮೃತಪಟ್ಟವರು.

ಇವರ ಮನೆ ಸಮೀಪದಲ್ಲಿರುವ ಗುಡ್ಡದಲ್ಲಿರುವ ಒಣಹುಲ್ಲು ತೆಗೆಯುವ ಉದ್ದೇಶದಿಂದ ಅದಕ್ಕೆ ಬೆಂಕಿ ನೀಡಿದ್ದರು. ಮಧ್ಯಾಹ್ನದ ಉರಿ ಬಿಸಿಲಿನ ಗಾಳಿಯಿಂದಾಗಿ ಬೆಂಕಿಯ ಜ್ವಾಲೆಯ ಇವರಿಗೆ ಹತ್ತಿಕೊಂಡಿರಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!