ತುಳುನಾಡಿನ ಸಂಸ್ಕೃತಿ ಉಳಿಸಲು ಪಂಬದರ ಸಮಾಜ ಪಟ್ಟ ಶ್ರಮ ನಿಜಕ್ಕೂ ಮಾದರಿ- ಸ್ಪೀಕರ್ ಯು.ಟಿ. ಖಾದರ್

ಮಂಗಳೂರು, ಜ.25: ಕರಾವಳಿಯ ದೈವಾರಾಧನೆ ಮೂಲ ಸಂಸ್ಕೃತಿಯನ್ನು ಪಂಬದ ಸಮಾಜ ಉಳಿಸುವುದರ ಜತೆ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡುತ್ತಿದೆ. ಈ ಪರಂಪರೆ, ಸಂಸ್ಕೃತಿ ಉಳಿಯಬೇಕಾದರೆ ಪಂಬದರ  ಅಧ್ಯಯನ ಪೀಠವಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು” ಎಂದು ರಾಜ್ಯ ವಿಧಾನ ಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಪಂಬದರ ಅಭ್ಯುದಯ ಯುವಜನ ಸೇವಾ ಟ್ರಸ್ಟ್ ಪಡುಪೆರಾರ, ತುಳುವ ಬೊಳ್ಳಿ ಪ್ರತಿಷ್ಠಾನ, ಪಂಬದರ ಯಾನೆ ದೈವಾದಿಗರ ಸಮಾಜ ಸಂಘ ವತಿಯಿಂದ ನಗರದ ಪುರಭವನದಲ್ಲಿ ಭಾನುವಾರ ನಡೆದ ‘ಪಂಬದರೆನ ಸಮಾವೇಶ ಸಿರಿ ಮುಡಿ’ ಕಾರ್ಯಕ್ರಮದಲ್ಲಿ ಭರವಸೆ ನೀಡಿದರು. “ಶಿಕ್ಷಣ, ಮೂಲಸೌಕರ್ಯವಿಲ್ಲದಿದ್ದರೂ ತುಳುನಾಡಿನ ದೈವದ ಸಂಸ್ಕೃತಿ ಉಳಿಸಲು ಪಟ್ಟ ಶ್ರಮ ನಿಜಕ್ಕೂ ಮಾದರಿ, ಯಾವುದೇ ಲಿಪಿ ಇಲ್ಲದೇ ತುಳು ಭಾಷೆ ಇಷ್ಟು ಸಮೃದ್ಧಿಯಾಗಿ ಬೆಳೆಯ ಬೇಕಾದರೆ ಅದಕ್ಕೆ ಸಮುದಾಯದ ಕೊಡುಗೆ ದೊಡ್ಡದಿದೆ. ಆಧುನಿಕ, ಪಾಶ್ಚಿಮಾತ್ಯ ಸಂಸ್ಕೃತಿ ಯನ್ನು ದೈವಾರಾಧನೆ ಮೆಟ್ಟಿನಿಂತು ಬೆಳೆದಿದೆ” ಎಂದರು. ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.

ದುರ್ಗಾದಾಸ್ ಶೆಟ್ಟಿ ಮಾವಂತೂರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇಗುಲದ ಆರ್ಚಕರಾದ ಕಮಲಾ ದೇವಿ ಅಸ್ತ್ರಣ್ಣ ,ಅನಂತ ಪದ್ಮನಾಭ ಕ್ಷೇತ್ರದ ಕೃಷ್ಣರಾಜ್ ತಂತ್ರಿ, ಮೇಯರ್ ಸುಧೀರ್ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಪ್ರಕಾಶ್ ಪಿ ಎನ್, ಎಳತ್ತೂರು ಗುತ್ತುದ ಬಾಲಕೃಷ್ಣ ರೈ, ಸಂಸ್ಕಾರ ಭಾರತಿ ಸಂಸ್ಥೆಯ ಅಧ್ಯಕ್ಷ ಪುರುಷೋತ್ತಮ ಅಡ್ಯಾರ್, ಕುಲಶೇಖರ ಧರ್ಮಶಾಸ್ತ್ರ ಮಂದಿರ ಟ್ರಸ್ಟ್ ನ ಅಧ್ಯಕ್ಷ ರಾಮ್ ಪ್ರಸಾದ್, ಅಬ್ಬಕ್ಕ ಉತ್ಸವ ಸಮಿತಿ ಮುಖ್ಯಸ್ಥರಾದ ದಿನಕರ್ ಉಳ್ಳಾಲ್,ತಿದ್ಯೆ ಕಂಬಳ ಸುತ್ತಿನ ಮುಖ್ಯಸ್ಥ ಭಾಸ್ಕರ್ ಶೆಟ್ಟಿ, ಕಂಬಳ ಸಮಿತಿ ಗೌರವಾಧ್ಯಕ್ಷ ತಾರಾನಾಥ್, ಉದ್ಯಮಿ ಸಂತೋಷ್ ಕುಮಾರ್, ನವೀನ್ ಶೆಟ್ಟಿ ಎಡ್ಮೆಮ್ಮರ್, ಗಣೇಶ್ ಕೊಪ್ಪ, ಹರೀಶ್ ಪ್ರಸಾದ್, ದಕ್ಷಿಣ ವಲಯದ ಡಿಪಿಎಸ್ ಟಿ ಎಸ್ ಅಶ್ವತ್ಥನಾರಾಯಣ,ಹಿರಿಯ ಅಂಚೆ ಅಧಿಕಾರಿ ಸುಧಾಕರ್ ಮಲ್ಯ, ಪಡ್ಯೋಡಿ ಗುತ್ತು ಶಿಶಿರ್ ಶೆಟ್ಟಿ ಪಂಬದರು ಉಪಸ್ಥಿತರಿದ್ದರು.ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಪ್ರಾಸ್ತಾವಿಕ ಮಾತನಾಡಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!