ಸುಲ್ತಾನ್ ಡೈಮಂಡ್ಸ್ & ಗೋಲ್ಡ್: ವಿಶ್ವ ಡೈಮಂಡ್ ಪ್ರದರ್ಶನಕ್ಕೆ ಚಾಲನೆ

ಉಡುಪಿ, ಜ.20: ನಗರದ ವಿಎಸ್ಟಿ ರಸ್ತೆಯ ವೆಸ್ಟ್ಕೋಸ್ಟ್ ಕಟ್ಟಡದಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಂನಲ್ಲಿ ಜ.31ರವರೆಗೆ ಹಮ್ಮಿಕೊಳ್ಳಲಾದ ವಿಶ್ವ ವಜ್ರ- ಡೈಮಂಡ್ ಪ್ರದರ್ಶನ ಮತ್ತು ಮಾರಾಟಕ್ಕೆ ಇಂದು ಚಾಲನೆ ನೀಡಲಾಯಿತು.

ಪ್ರದರ್ಶನವನ್ನು ಉದ್ಘಾಟಿಸಿದ ಉಡುಪಿಯ ಮಾಂಡವಿ ರಿಯಲ್ ಎಸ್ಟೇಟ್ ಡೆವೆಲಪರ್ಸ್ನ ಆಡಳಿತ ನಿರ್ದೇಶಕ ಡಾ.ಜೆರ್ರಿ ವಿನ್ಸೆಂಟ್ ಡಯಸ್ ಮಾತನಾಡಿ, ಸುಲ್ತಾನ್ನಲ್ಲಿ ಉತ್ತಮ ಸಂಗ್ರಹವಿದೆ. ಗ್ರಾಹಕ ಸ್ನೇಹಿ ಸಿಬ್ಬಂದಿಗಳಿಂದಾಗಿ ಸಂಸ್ಥೆಯು ಜನರಿಗೆ ಸಾಕಷ್ಟು ಹತ್ತಿರವಾಗಿದೆ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉಡುಪಿಯ ಉದ್ಯಮಿ ಅಬ್ದುಲ್ ಹಮೀದ್ ಬಿ., ಕೋಟ ಜನತಾ ಫಿಶ್ಮಿಲ್ನ ಪ್ರಶಾಂತ್ ಕುಂದರ್, ನಾವುಂದ ಟಿಎಫ್ಎನ್ ಫಿಶರೀಸ್ನ ಎನ್.ಎ.ಮುಹಮ್ಮದ್ ತೌಫೀಕ್, ದೇವಿನಗರ ಬಳಕೆ ದಾರರ ವೇದಿಕೆಯ ಅಜೀವ ಗೌರವಾಧ್ಯಕ್ಷ ಹಾಜಿ ಕೆ.ಅಬೂಬಕ್ಕರ್, ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಎಸ್.ಶೆಟ್ಟಿ, ಕಾಪು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಶ್ವಿನಿ ಎನ್.ಬಂಗೇರ ಅವರು ಇಟಲಿ, ಟರ್ಕಿ, ಬೆಲ್ಜಿಯಂ, ಯುಎಸ್, ಸಿಂಗಾಪುರ ಮತ್ತು ಮಿಡ್ಲ್ ಈಸ್ಟ್ ಡೈಮಂಡ್ಗಳನ್ನು ಅನಾವರಣ ಗೊಳಿಸಿದರು.

ಸುಲ್ತಾನ್ ಗೋಲ್ಡ್ ಪ್ರಾದೇಶಿಕ ವ್ಯವಸ್ಥಾಪಕ ಸುಮೇಶ್, ಉಡುಪಿ ಬ್ರಾಂಚ್ ಮೆನೇಜರ್ ಬಿಜು ಮ್ಯಾಥ್ಯು, ಸೇಲ್ಸ್ ಮೇನೆಜರ್ ಇಲಿಯಾಸ್ ಬಿ., ಸುಲ್ತಾನ್ ಗೋಲ್ಡ್ ವಾಚ್ ವಿಭಾಗದ ಮುಖ್ಯಸ್ಥ ಅಬ್ದುಲ್ ರಶೀದ್ ಮುಲ್ಕಿ, ಸುಲ್ತಾನ್ ಗ್ರೂಪ್ ಉಡುಪಿ ಫ್ಲೋರ್ ಮೆನೇಜರ್ ಸಿದ್ದಿಕ್ ಹಸನ್, ಅಜಯನ್, ಡೈಮಂಡ್ ಇನ್ಚಾರ್ಜ್ ವಾಹೀದ್ ಪಿ.ಎಂ., ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ಸಾಹಿಲ್ ಝಾಹೀರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವಿಶ್ವದ ವಿವಿಧ ದೇಶಗಳ ವಿವಿಧ ಹೊಸ ಮಾದರಿಯ 10ಸಾವಿರ ಕ್ಯಾರೆಟ್ಗಿಂತ ಅಧಿಕ ಡೈಮಂಡ್ಗಳ ಸಂಗ್ರಹ ಈ ಪ್ರದರ್ಶನದಲ್ಲಿದೆ. ಇಲ್ಲಿ ಡೈಲಿ ವೇರ್ ಲೈಟ್ವೇಟ್ ಡೈಮಂಡ್ ನೆಕ್ಲೇಸ್ 80ಸಾವಿರ ರೂ., ಲೈಟ್ವೈಟ್ ಡೈಮಂಡ್ ಬಳೆ 35ಸಾವಿರ ರೂ., ಡೈಮಂಡ್ ರಿಂಗ್ 8000ರೂ.ನಿಂದ ಆರಂಭಗೊಳ್ಳುತ್ತದೆ.

ಪ್ರದರ್ಶನದಲ್ಲಿ ಐಷರಾಮಿ ವಜ್ರಾಭರಣಗಳ ಸಂಗ್ರಹ, ಸಾಲಿಟೈರ್ ಕಲೆಕ್ಷನ್, ಸಾಂಪ್ರದಾಯಿಕ ಶೈಲಿಯ ವಜ್ರಾಭರಣಗಳು, ತನ್ಮನಿಯಾ ಕಲೆಕ್ಷನ್, ಬ್ರೈಡಲ್ ವಜ್ರಾಭರಣ ಕಲೆಕ್ಷನ್, ಅನ್ಕಟ್ ಡೈಮಂಡ್, ರುಬಿ ಎಮೆರಾಲ್ಡ್ ಜೆಮ್ ಸ್ಟೋನ್ ಕಲೆಕ್ಷನ್ಗಳ ಸಂಗ್ರಹ ಇವೆ. ಪ್ರತಿ ಡೈಮಂಡ್ ಕ್ಯಾರೆಟ್ ಮೇಲೆ 8000ರೂ. ರಿಯಾ ಯಿತಿ ನೀಡಲಾಗುವುದು ಎಂದು ಉಡುಪಿ ಬ್ರಾಂಚ್ ಮೆನೇಜರ್ ಬಿಜು ಮ್ಯಾಥ್ಯು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!