ಶ್ರೀರಾಮನ ಶಕ್ತಿ, ಹನುಮನ ಭಕ್ತಿ ಕೆಣಕಿದ ರಾವಣನೇ ಉಳಿಯಲಿಲ್ಲ, ರಾಜಣ್ಣ ಯಾವ ಲೆಕ್ಕ?; ಫೇಕ್ ಸುದ್ದಿ ಸೃಷ್ಟಿಸುವ ಎಡಿಟಿಂಗ್ ಮಾಸ್ಟರ್!

ಬೆಂಗಳೂರು: ಸುಳ್ಳು ಹೇಳುವುದು, ಜನರನ್ನು ವಂಚಿಸುವುದು, ಫೇಕ್ ಸುದ್ದಿಗಳನ್ನು ಸೃಷ್ಟಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚೆನ್ನಾಗಿಯೇ “ಸಿದ್ದಿ”ಸಿದೆ. ಇವರು ಎಡಿಟಿಂಗ್ ಮಾಸ್ಟರ್ ಎಂದು ಕರ್ನಾಟಕ ಬಿಜೆಪಿ ಟೀಕಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಸುಳ್ಳು ಹೇಳುವುದು, ಜನರನ್ನು ವಂಚಿಸುವುದು, ಫೇಕ್ ಸುದ್ದಿಗಳನ್ನು ಸೃಷ್ಟಿಸುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಚೆನ್ನಾಗಿಯೇ “ಸಿದ್ದಿ”ಸಿದೆ. ನಕಲಿ ಸುದ್ದಿಗಳನ್ನು ರಚಿಸುತ್ತಾ ಕಾಲಹರಣ ಮಾಡುವ ಬದಲು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಯೋಚಿಸಿದ್ದರೆ, ರೈತರು ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ, ಮಹಿಳೆಯರ ಮೇಲೆ ಹಲ್ಲೆ, ಮಾನಭಂಗಗಳು ನಡೆಯುತ್ತಿರಲಿಲ್ಲ. ಎಲ್ಲೆಂದರಲ್ಲಿ ಸದಾ ನಿದ್ದೆಗೆ ಜಾರುವುದು ನೀವು ಎಂಬುದು ಜಗತ್ತಿಗೆ ತಿಳಿದಿರುವ ವಿಷಯ. ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಿಯವರ ನ್ನು ಅವಹೇಳನ ಮಾಡಿದರೆ ಜನ ನಂಬುತ್ತಾರೆ ಎಂಬ ಭ್ರಮೆಯಿಂದ ಆದಷ್ಟು ಬೇಗ ಹೊರ ಬನ್ನಿ ಎಂದು ಲೇವಡಿ ಮಾಡಿದೆ.

ಶ್ರೀರಾಮನ ಶಕ್ತಿ, ಹನುಮನ ಭಕ್ತಿಯ ಕೆಣಕಿದ ರಾವಣನೇ ಉಳಿಯಲಿಲ್ಲ, ರಾಜಣ್ಣ ಯಾವ ಲೆಕ್ಕ? ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಹಿಂದೂ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಕಾಗ್ರೆಸ್ ಪಕ್ಷಕ್ಕೆ ಅಂಟಿದ ಕುಷ್ಠ ರೋಗವಿದ್ದಂತೆ. ಶತ ಶತಮಾನಗಳ ಕೋಟ್ಯಂತರ ರಾಮಭಕ್ತರ ಹೋರಾಟ, ಸಹಸ್ರಾರು ಕರಸೇವಕರ ಬಲಿದಾನಗಳಿಂದ ಭವ್ಯ ರಾಮಮಂದಿರದಲ್ಲಿ ಬಾಲರಾಮ ನೆಲೆಸುತ್ತಿರುವ ಸಮಯದಲ್ಲಿ, ಶ್ರೀರಾಮ ಸೀತೆಯರನ್ನು ಗೊಂಬೆಗೆ ಹೋಲಿಸುತ್ತಿರುವ ಸಹಕಾರ ಸಚಿವ ರಾಜಣ್ಣರವರೇ, ನಾಡಿನ ಜನರಷ್ಟೇ ಅಲ್ಲ, ನಿಮ್ಮನ್ನು ಕಾಂಗ್ರೆಸ್ ಕಾರ್ಯಕರ್ತರೂ ಕ್ಷಮಿಸಲಾರರು! ಅಧಿಕಾರದ ಮದ, ಕಾಂಗ್ರೆಸ್ ಗುಲಾಮಿತನದಿಂದ ಹೊರಬಂದು, ನಿಮ್ಮ ಕ್ಷೇತ್ರದ ಮತದಾರರನ್ನಾದರೂ ಕೇಳಿ, ನಿಮ್ಮ ಕುಟುಂಬಸ್ಥರನ್ನಾದರೂ ಕೇಳಿ ತಿಳಿಯಿರಿ ಎಂದು ಬಿಜೆಪಿ ತಿರುಗೇಟು ನೀಡಿದೆ.

Leave a Reply

Your email address will not be published. Required fields are marked *

error: Content is protected !!