ಉಡುಪಿ: ಗೀತಾಂಜಲಿ ಸಿಲ್ಕ್ಸ್‌ಗೆ ಪರ್ಯಾಯ ಪುತ್ತಿಗೆ ಶ್ರೀಗಳ ಭೇಟಿ
ಉಡುಪಿ: ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉಡುಪಿಯ ಪ್ರಸಿದ್ಧ ಜವಳಿ ಮಳಿಗೆಯಾದ ”ಗೀತಾಂಜಲಿ ಸಿಲ್ಕ್ಸ್“ಗೆ ಇಂದು ಭೇಟಿ ನೀಡಿ ಸಂಸ್ಥೆಯ ಗೌರವ ಸ್ವೀಕರಿಸಿದರು.
ಬಳಿಕ ಪುತ್ತಿಗೆ ಶ್ರೀಗಳು ಅನುಗ್ರಹ ಸಂದೇಶ ಹಾಗೂ ಕೋಟಿ ಗೀತಾ ಲೇಖನ ಅಭಿಯಾನ, ಫಲಮಂತ್ರಾಕ್ಷತೆ ನೀಡಿ ವಿಶ್ವ ಗೀತಾ ಪರ್ಯಾಯಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಸಂತೋಷ ವಾಗ್ಲೆ, ರಾಮಕೃಷ್ಣ ನಾಯಕ್, ಲಕ್ಷ್ಮಣ್ ನಾಯಕ್, ರಮೇಶ್ ನಾಯಕ್, ಹರೀಶ್ ನಾಯಕ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.