ಯಕ್ಷಗಾನ ಪ್ರದರ್ಶನ – ತ್ರಿವಳಿ ಧರ್ಮದ ಕಲಾವಿದರಿಗೆ ಸನ್ಮಾನ

ಉಡುಪಿ: ಶ್ರೀನಾರಾಯಣ ಗುರು ಯುವ ವೇದಿಕೆ ಉಡುಪಿ ಆಶ್ರಯದಲ್ಲಿ ಜರಗಿದ ಶ್ರೀನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿಯ ಯಕ್ಷಗಾನ ಪದರ್ಶನದ ಸಂದರ್ಭ ಮೇಳದ ಕಲಾವಿದರಾದ ಚಿಟ್ಟಾಣಿ ಸುಬ್ರಹ್ಮಣ್ಯ ಹೆಗಡೆ, ಮಾರ್ಷೆಲ್ ಫೆರ್ನಾಂಡಿಸ್ ಮತ್ತು ಹವ್ಯಾಸಿ ಕಲಾವಿದರಾದ ಅಶ್ಫಕ್ ಹುಸೇನ್ ಅವರನ್ನು ಶ್ರೀನಂದಿಕೇಶ್ವರ ದೇವಸ್ಥಾನ, ಶ್ರೀಕ್ಷೇತ್ರ ಮೆಕ್ಕೆಕಟ್ಟು ಇದರ ಮುಕ್ತೇಸರರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಇವರು ವೇದಿಕೆ ವತಿಯಿಂದ ಅಭಿನಂದಿಸಿದರು.

ಶ್ರೀನಾರಾಯಣ ಗುರು ಯುವ ವೇದಿಕೆಯ ಗೌರವಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ ಅವರು ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷರಾದ ಮಿಥುನ್ ಅಮೀನ್, ಸದಸ್ಯರಾದ ಶಬರೀಶ್ ಸುವರ್ಣ, ಸಚಿನ್ ಸಾಲಿಯಾನ್, ದಿವಾಕರ್ ಬೊಳ್ಜೆ, ಸುಧಾಕರ್ ಬೊಳ್ಜೆ, ಸುಪ್ರೀತ್ ಸುವರ್ಣ, ಕಿಶೋರ್ ಉದ್ಯಾವರ ಮೊದಲಾದವರು ಉಪಸ್ಥಿತರಿದ್ದರು. ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು‌. ಈ ಸನ್ಮಾನ ಸಮಾರಂಭವು ಶ್ರೀನಾರಾಯಣ ಗುರುಗಳು ಬೋಧಿಸಿದಂತ ಸರ್ವಧರ್ಮ ಸಮನ್ವಯತೆಯ ರೂಪಕವಾಗಿ ಯಕ್ಷಪ್ರೇಕ್ಷಕರಿಂದ ಶ್ಲಾಘನೆಗೆ ಒಳಗಾಯಿತು. ಬಳಿಕ “ಸಾಗರಸಂಗಮ” ಯಕ್ಷಗಾನ ಪ್ರದರ್ಶನ ಕಿಕ್ಕಿರಿದ ಜನಸಂದಣೆಯೊಂದಿಗೆ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

error: Content is protected !!