ಜ.21: ‘ನಾರೀ ಶಕ್ತಿ’ ಮಾನಿನಿ ಮನ್ವಂತರ ಯಕ್ಷಗಾನ ತಾಳಮದ್ದಳೆ- ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ: ಸುಶಾಸನ ಉಡುಪಿ ವತಿಯಿಂದ ಪುತ್ತಿಗೆ ಪರ್ಯಾಯ ಮಹೋತ್ಸವದ ಸಾಂಸ್ಕೃತಿಕ ಸಪ್ತೋತ್ಸವ ಅಂಗವಾಗಿ ರಾಜಾಂಗಣದಲ್ಲಿ ಜ. 21ರ ಮಧ್ಯಾಹ್ನ 1.30 ಕ್ಕೆ ಜರಗುವ ಪ್ರಸಂಗಾರ್ಪಣೆ – ಪ್ರಯೋಗ ‘ನಾರೀ ಶಕ್ತಿ’ ಮಾನಿನಿ ಮನ್ವಂತರ ಯಕ್ಷಗಾನ ತಾಳಮದ್ದಳೆಯ ಆಮಂತ್ರಣ ಪತ್ರಿಕೆಯನ್ನು ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ರವಿವಾರ ಕನಕಮಂಟಪದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಟಿ. ಶಂಭು ಶೆಟ್ಟಿ ಕೆ. ಉದಯಕುಮಾರ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಭುವನ ಪ್ರಸಾದ್ ಹೆಗ್ಡೆ ಪ್ರೊ| ಎಂ.ಎಲ್. ಸಾಮಗ, ಪ್ರೊ| ಪವನ್ ಕಿರಣ್ ಕೆರೆ, ಡಾ|ವಿಟ್ಲ ಹರೀಶ್ ಜೋಷಿ, ತ್ರಿಲೋಚನಾ ಶಾಸ್ತ್ರಿ, ಎಂ.ಎಸ್ ವಿಷ್ಣು ಭಟ್, ರಂಜನ್ ಕಲ್ಕೂರ, ಅಮಿತಾ ಆಚಾರ್ಯ, ಪುತ್ತಿಗೆ ಮಠದ ಪ್ರಸನ್ನ ಆಚಾರ್ಯ, ರಮೇಶ್ ಭಟ್ ಹಾಗೂ ಕಾರ್ಯಕ್ರಮ ಆಯೋಜಕರಾದ ಸುಧಾಕರ್ ಆಚಾರ್ಯ ಉಪಸ್ಥಿತರಿದ್ದರು.