‘ಸಂಸದ ಅನಂತಕುಮಾರ್ ಕುಂಭಕರ್ಣನಿದ್ದಂತೆ’- ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು, ಜ.15: ಸಂಸದ ಅನಂತಕುಮಾರ್ ಹೆಗಡೆ ಕುಂಭಕರ್ಣನಿದ್ದಂತೆ. ನಾಲ್ಕೂವರೆ ವರ್ಷ ಮಲಗುವುದು, ಚುನಾವಣೆ ಬಂದಾಗ ಏಳುವುದು ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ದಲಿತ, ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಏಳಿಗೆಯನ್ನು ಸಹಿಸದ ವಿಕೃತ ಮನಸ್ಥಿತಿಯ ಪರಂಪರೆಯನ್ನು ಮುಂದುವರಿಸುವ ಅನಂತ್ ಕುಮಾರ್ ಹೆಗಡೆಯಂತಹ ಕ್ರಿಮಿಕೀಟಗಳು ಈ ದೇಶಕ್ಕೆ ಕ್ಯಾನ್ಸರ್‌ನಂತೆ ಕಾಡುತ್ತವೆ. ಈ ಕ್ಯಾನ್ಸರ್‌ಗೆ ಸಂವಿಧಾನದಲ್ಲಿ ಔಷಧವಿದೆ ಎಂದಿದೆ. ಇನ್ನು ಕಾಂಗ್ರೆಸ್ ಪಕ್ಷದ ಬಗ್ಗೆ, ಸಿದ್ದರಾಮಯ್ಯ ಅವರ ಬಗ್ಗೆ ತನ್ನ ಕೊಳಕು ನಾಲಿಗೆ ಹರಿಬಿಡುವ ಮೊದಲು ಸಂಸದನಾಗಿ ತನ್ನ ಸಾಧನೆ ಏನು ಎಂಬುದನ್ನು ಜನತೆಗೆ ತಿಳಿಸಲಿ. ಈ ಅಸಹ್ಯದ ವ್ಯಕ್ತಿಯಲ್ಲಿ ಪುರೋಹಿತಶಾಹಿಯ ಅಹಂಕಾರ ಮಿತಿ ಮೀರಿ ನರ್ತಿಸುತ್ತಿದೆ. ಈ ಅಹಂಕಾರದ ಮದ ಇಳಿಸುವ ತಾಕತ್ತು ಕನ್ನಡಿಗರಿಗೆ ಇದೆ ಎಂದು ವಾಗ್ದಾಳಿ ನಡೆಸಿದೆ.

Leave a Reply

Your email address will not be published. Required fields are marked *

error: Content is protected !!