ಜಗತ್ತಿನಲ್ಲಿ ಅತಿ ಹೆಚ್ಚು ಕಡೆಗಣಿಸ್ಪಡುತ್ತಿರುವವರು ವೃದ್ಧ ತಂದೆ ತಾಯಂದಿರು – ಮಹಮ್ಮದ್ ಕುಂಞಿ
“ಸುದೃಢ ಕುಟುಂಬ, ಸುಭದ್ರ ಸಮಾಜ” ವಿಚಾರಗೋಷ್ಠಿ“
ಉಡುಪಿ : ಈ ಜಗತ್ತಿನಲ್ಲಿ ಅತಿ ಹೆಚ್ಚು ಕಡೆಗಣಿಸಲ್ಪಡುವವರು ಯಾರದರು ಇದ್ದರೆ ಅದು ವೃದ್ದರಾದ ತಂದೆ ತಾಯಿಗಳು, ಕುಟುಂಬ ಸಂಬಂಧಗಳು ಶಿಥಿತಲಾಗುತ್ತಿದೆ ಬೆಳೆದು ನಿಂತ ಮಕ್ಕಳು ವೃದ್ದರಾದ ತಂದೆ ತಾಯಿಗಳನ್ನು ವೃದ್ದಾಶ್ರಮಕ್ಕೆ ಅಟ್ಟುತ್ತಿದ್ದಾರೆ, ಪಾಶ್ಯಾತ್ಯ ಸಂಸ್ಖೃತಿಗಳು ನಮ್ಮನ್ನು ಆವರಿಸುತ್ತಿದೆ ಇಂದಿನ ಹೊಸ ತಲೆ ಮಾರಿಗೆ ಇಷ್ಟವಿಲ್ಲದ ಒಂದು ಸ್ಥಳ ಇದ್ದರೆ ಅದು ಅವರ ಮನೆ ಆಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಹೇಳಿದರು ಇವರು ಉಡುಪಿಯ ಡಾನ್ ಬಾಸ್ಕೋ ಹಾಲ್ ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ವತಿಯಿಂದ ಹಮ್ಮಿಕೊಂಡ ಸುದೃಢ ಕುಟುಂಬ, ಸುಭದ್ರ ಸಮಾಜ ಎಂಬ ವಿಷಯದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಜಗತ್ತಿನ ಎಲ್ಲಾ ಧರ್ಮಗಳಲ್ಲಿಯೂ ಕೌಟುಂಬಿಕ ವ್ಯವಸ್ಥಗೆ ಬಹಳ ಪ್ರಾಮುಖ್ಯತೆ ಇದೆ, ಎಲ್ಲೂ ಸಿಗದಂತಹ ಸೇವೆಗಳು ಕುಟುಂಬಲ್ಲಿ ನಮಗೆ ಸಿಗುತ್ತದೆ. ಬ್ರಹ್ಮಾಂಡ ಉಳಿಯಬೇಕಾದರೆ ಯಾವ ರೀತಿ ಸೂರ್ಯ, ಚಂದ್ರ, ನಕ್ಷತ್ರ, ಮಳೆ ಗಾಳಿ ಮುಖ್ಯವೋ ಅದೇ ರೀತಿ ಈ ಸಮಾಜ ಉಳಿಯಬೇಕಾದರೆ ಕುಟುಂಬ ಇರಬೇಕು ಕುಟುಂಬ ಇಲ್ಲದಿದ್ದರೆ ಸಮಾಜ ಉಳಿಯುವುದಿಲ್ಲ. ಕುಟುಂಬ ಸಂಬಂಧವನ್ನು ಹಾಳು ಮಾಡಿದವನನ್ನು ಪ್ರವಾದಿ ಮುಹಮ್ಮದರು ಮಸೀದಿಯಿಂದಲೇ ಓಡಿಸಿದ್ದರು ಎಂದು ಹೇಳಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ ಮಣಿಪಾಲ ಪೋಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ಮಾತನಾಡಿ ಯುವಕರು ಹೆಚ್ಚಾಗಿ ಮದ್ಯ ವೆಸನ ಡ್ರಗ್ಸ್ ಗೆ ಬಲಿಯಾಗುತ್ತಿದ್ದು ಪೋಷಕರು ಎಚ್ಚೆತ್ತುಕೊಳ್ಳದಿದ್ದರೆ ಸಮಾಜ ಇನ್ನಷ್ಟು ಹಾಳಾಗುವುದರಲ್ಲಿ ಯಾವುದೇ ಸಂಶಯ ಪಡಬೇಕಾಗಿಲ್ಲ ಸೈಬರ್ ಕ್ರೈ, ಆನ್ ಲೈನ್ ಗೇಮಿಂಗ್ ಗೆ ಒಳಗಾಗಿ ಪ್ರತಿ ದಿನ ಲಕ್ಷಾಂತರ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಇದಕ್ಕೆ ನಾವುಗಳು ಜಾಗೃತರಾಗಬೇಕು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಡಾ ಎ ವಿ ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಮನೋ ವೈದ್ಯರಾದ ಡಾ.ಮಾನಸ್ ರವರು ಮಾತನಾಡಿ ಪ್ರತಿದಿನ ಒಂದಲ್ಲ ಒಂದು ಸಮಸ್ಯೆಗಳನ್ನು ಹಿಡಿದುಕೊಂಡು ನಮ್ಮ ಆಸ್ಪತ್ರೆಗೆ ರೋಗಿಗಳು ಬರುತ್ತಲೇ ಇರುತ್ತಾರೆ ಮಾನಸಿಕ ಖಿನ್ನತೆಗೆ ಒಳಗಾಗಿ ಬಹಳ ಜನರು ಬಳಲುತ್ತಿದ್ದಾರೆ. ಈ ಮೊಬೈಲ್ ಬಂದ ನಂತರದಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ ಹೊರತು ಕಡಿಮೆ ಅಂತು ಆಗಿಲ್ಲ. ಹಲವು ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರ ಎಂದು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ ಅಂತವರಿಗೆ ಸರಿಯಾದ ಮನೋ ವೈದ್ಯರ ಸಮಾಲೋಚನೆ ಅಗತ್ಯವಿದೆ ಎಂದು ಹೇಳಿದರು.
ಇನ್ನೋರ್ವ ಅಥಿತಿಯಾಗಿ ಆಗಮಿಸಿದ ಸುಗಮ್ಯ ಮಹಿಳಾ ಸಂಘದ ಸ್ಥಾಪಕಾಧ್ಯಕ್ಷರಾದ ಜನೇಟ್ ಬರ್ಬೋಝ ಮಾತನಾಡಿ ಕುಟುಂಬ ಸಂಬಂಧಗಳು ಸುದೃಢವಾಗಿದ್ದರೆ ಸಮಾಜ ಕೂಡ ಸುಭಧ್ರವಾಗಿರುತ್ತದೆ. ಸಮಾಜದಲ್ಲಿ ಪರಸ್ಪರ ಸೌಹಾರ್ದತೆಯಿಂದ ಕೂಡಿ ಬಾಳಿದರೆ ಕುಟುಂಬ ಸಂಬಂಧಗಳ ಜೊತೆಗೆ ಸಮಾಜಿಕ ಸಂಬಂಧಗಳು ಕೂಡ ಬಲಿಷ್ಠ ಆಗುತ್ತದೆ ಎಂದು ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಘಟಕದ ಅಧ್ಯಕ್ಷರಾದ ನಿಸಾರ್ ಅಹಮದ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕರಾದ ರಯೀಸ್ ಅಹಮದ್ ಧನ್ಯವಾದ ಹೇಳಿದರು. ಮಹಿಳಾ ವಿಭಾಗದ ಅಧ್ಯಕ್ಷೆ ವಾಜಿದಾ ತಬಸ್ಸುಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಜಲಾಲುದ್ದಿನ್ ಹಿಂದ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಪಡೆದ ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಉಪನ್ಯಾಸಕರಾದ ಕೆ ಸುಕುಮಾರ್ ಶೆಟ್ಟಿ, ದ್ವಿತೀಯ ಬಹುಮಾನ ಪಡೆದ ಯಶಸ್ವಿ ಟುಟೋರಿಯಲ್ ಪಿ ಯು ಕಾಲೇಜಿನ ಸೂರಜ್ ಮತ್ತು ತೃತಿಯ ಬಹುಮಾನ ಪಡೆದ ಪ್ಲವರ್ ಆಫ್ ಪ್ಯಾರಡೈಸ್ ನ ಉಪನ್ಯಾಸಕಿ ಮರ್ಸೆಲ್ಲ ಡಿ ಸೋಜಾರವರಿಗೆ ಸನ್ಮಾನಿಸಲಾಯಿತು.