ಭಾರತ ವಿಶ್ವ ಗುರುವಾಗಲು ಸಾತ್ವಿಕ ಶಿಕ್ಷಣದ ಅಗತ್ಯವಿದೆ: ಗಿರೀಶ್ ಎಂ ಶೆಟ್ಟಿ
ಸುರತ್ಕಲ್ : ಭಾರತ ವಿಶ್ವಗುರುವಾಗಲು ಸಾತ್ವಿಕ ಶಿಕ್ಷಣದ ಅಗತ್ಯವಿದೆ ಯುವಜನರು ತಮ್ಮೊಳಗಿನ ಸಾಮರ್ಥ್ಯವನ್ನು ಅರಿಯುವ ಜತೆಗೆ ಹಿರಿಯರು ಸಮಾಜಕ್ಕೆ ಪ್ರಾಮುಖ್ಯ ನೀಡಬೇಕಿದೆ ಎಂದು ಶ್ರೀ ಡೆವಲಪರ್ಸ್ ಕಟೀಲು ಅಡಳಿತ ನಿರ್ದೇಶಕ ಗಿರೀಶ್ ಎಂ ಶೆಟ್ಟಿ ಕಟೀಲು ನುಡಿದರು.
ಅವರು ಸುರತ್ಕಲ್ ಅಭೀಷ್ ಕಟ್ಟಡದಲ್ಲಿರುವ ಚಾವಡಿ ಸಭಾಂಗಣದಲ್ಲಿ ಜರಗಿದ ಜೆಸಿಐ ಸುರತ್ಕಲ್‌ನ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜೆಸಿಐ ಸುರತ್ಕಲ್ ಸಂಸ್ಥೆ ಯುವಕರನ್ನು ಒಳಗೊಂಡ ಸಂಘಟನೆಯಾಗಿ ಸುರತ್ಕಲ್ ಪರಿಸರದಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಮುಂದೆಯೂ ಸಮಾಜ ಸೇವೆ ಮುಂದುವರಿಯಲಿ ಎಂದರು. ಮುಖ್ಯ ಅತಿಥಿಯಾಗಿ ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೆಯ ಮಧ್ಯಸ್ಥ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಜೆಸಿಐ ವಲಯ ಅಲ್ಯೂಮಿನಿಯಂ ಕ್ಲಬ್ ಅಧ್ಯಕ್ಷ ಲೋಕೇಶ್ ರೈ, ವಲಯಾ 15 ರ ಉಪಾಧ್ಯಕ್ಷ ರಾಕೇಶ್ ಹೊಸಬೆಟ್ಟು,ಜೆಸಿಐ ಸುರತ್ಕಲ್ ,ಕಾರ್ಯ ದರ್ಶಿ ಸಂತೋಷ್ ಕುಮಾರ್, ಲೇಡಿ ಜೆಸಿ ಕೋ ಅರ್ಡಿನೇಟರ್ ಶಕುಂತಳಾ ಅಚಾರ್ಯ, ಜೆಜೆಸಿ ಅಧ್ಯಕ್ಷ ಜೀತಿನ್ ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯೆಕ್ಷೆಯಾಗಿ ಜ್ಯೋತಿ ಪಿ ಶೆಟ್ಟಿ: 2024 ರ ಸಾಲಿನ ನೂತನ ಅಧ್ಯಕ್ಷರಾಗಿ ಜ್ಯೋತಿ ಪ್ರವೀಣ್ ಶೆಟ್ಟಿ ಉಪಾಧ್ಯಕ್ಷರಾಗಿ ಸಂದೀಪ್ ಶೆಟ್ಟಿ, ಜ್ಯೋತಿ ಜೆ ಶೆಟ್ಟಿ, ಭಾರತಿ ನಿರಂಜನ್, ಹರಿಪ್ರಸಾದ್ ಶೆಟ್ಟಿ, ಶ್ರೀ ಶೈಯ್ ಶೆಟ್ಟಿ, ಕಾರ್ಯ ದರ್ಶಿಯಾಗಿ ಸವಿತಾ ಬಿ ಶೆಟ್ಟಿ , ಜತೆ ಕಾರ್ಯ ದರ್ಶಿಯಾಗಿ ರಾಹುಲ್ ಸುವರ್ಣ, ಕೋಶಾಧಿಕಾರಿಯಾಗಿ, ಅನಿತಾ ಎಸ್ ಶೆಟ್ಟಿ, ಜೆಸಿರೇಟ್ ಕೊರ್ಡಿನೆಟರ್ ಸೌಮ್ಯ ಆರ್ ಶೆಟ್ಟಿ, ಜೆಜೆಸಿಯಾಗಿ ದಯೇಶ್ ಬಿ ಶೆಟ್ಟಿ ಆಯ್ಕೆಯಾದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸುರತ್ಕಲ್ ಅಧ್ಯಕ್ಷ ಜಯರಾಜ್ ಆಚಾರ್ಯ ವಹಿಸಿದ್ದರು.