ಸ್ವಷ್ಟ ನಿಧಾ೯ರವೆ ಯಶಸ್ವಿನ ಮೊದಲ ಹೆಜ್ಜೆ ಎಚ್.ರಾಜೇಶ್ ಪ್ರಸಾದ್
ಉಡುಪಿ: ಯಾವುದೇ ರಂಗದಲ್ಲಿ ನಾವೇನಾದರು ಸಾಧನೆ ಮಾಡ ಬೇಕಾದರೆ ನಾವು ಮೆಾದಲು ಮಾಡ ಬೇಕಾದದ್ದು ಸ್ವಷ್ಟ ಪ್ರಾಮಾಣಿಕ ನಿಧಾ೯ರ.ಈ ನಿಧಾ೯ರಗಳೇ ನಮ್ಮ ಬದುಕಿನ ಕನಸಾಗಿ ಪರಿವತ೯ನೆಗೊಳ್ಳುತ್ತದೆ. ಇದನ್ನು ಸಾಧಿಸಿತೇುಾರಿಸ ಬೇಕಾದರೆ ಈ ದಿಕ್ಕಿನಲ್ಲಿ ನಿರಂತರ ಪ್ರಯತ್ನವೂ ಅಷ್ಟೇ ಅಗತ್ಯ.ಪ್ರಯತ್ನದ ದಾರಿಯಲ್ಲಿ ಸೇುಾಲು ನೇೂವುಗಳು ಬರುವುದು ಸಹಜ.ಇದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದಾಗ ಯಶಸ್ವಿ ನಮ್ಮದಾಗುತ್ತದೆ” ಎಂದು ಹಿರಿಯಡಕ ರಾಜೇಶ್ ಪ್ರಸಾದ್ ಮುಖ್ಯಕಾರ್ಯದಶಿ೯ಗಳು ಜಮ್ಮು ಕಾಶ್ಮೀರ ಸರ್ಕಾರ ಅಭಿಪ್ರಾಯಿಸಿದರು.
ತೆಂಕನಿಡಿಯುಾರು ಸರಕಾರಿ ಪ್ರಥಮ ದಜೆ೯ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐ.ಕ್ಯುಾ.ಎ.ಸಿ ಮತ್ತು ಉದ್ಯೋಗ ಮಾಹಿತಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವೃತ್ತಿ ಮಾಗ೯ದಶ೯ನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಇಂದಿನ ಸ್ಪಧಾ೯ತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ ನಾವು ಗಳಿಸುವ ಪದವಿಯ ಅಂಕಗಳೊಂದೆ ಮಾನದಂಡವಾಗುವುದಿಲ್ಲ..ದಿನ ನಿತ್ಯದ ಪ್ರಾಪಂಚಿಕ ಜ್ಞಾನವುಾ ಅಷ್ಟೇ ಮುಖ್ಯ.ಈ ನಿಟ್ಟಿನಲ್ಲಿ ದಿನ ನಿತ್ಯವೂ ಪತ್ರಿಕೆಗಳನ್ನು ಓದಿ ಮಾಹಿತಿ ಸಂಗ್ರಹಿಸಿ ವಿಶ್ಲೇಷಣೆ ಮಾಡುವ ಗುಣವನ್ನು ಬೆಳೆಸಿಕೊಳ್ಳ ಬೇಕಾದ ಅಗತ್ಯವಿದೆ. ಮೊದಲಿಗೆ ಚಿಕ್ಕ ಪುಟ ಉದ್ಯೋಗ ಸಿಕ್ಕಿದರುಾ ಸ್ವೀಕರಿಸಿ ಅನಂತರದಲ್ಲಿ ದೆುಾಡ್ಡ ಕನಸುಗಳನ್ನು ಸಾಧಿಸಲು ಪ್ರಯತ್ನ ಶೀಲರಾಗಬೇಕು. ಹಾಗಾಗಿ ಯಶಸ್ವಿಗೆ ಯಾವುದೇ ಅಡ್ಡ ದಾರಿ ಇಲ್ಲ. ನಿರಂತರ ಪ್ರಯತ್ನ ಒಂದೆ ಯಶಸ್ವಿನ ದಾರಿ ಅನ್ನುವುದು ನಮ್ಮ ಬದುಕಿನ ನಿತ್ಯದ ಪಾಠವಾಗ ಬೇಕು.ನಮ್ಮ ಸೇವೆಯಲ್ಲಿ ಪ್ರಾಮಾಣಿಕತೆಯ ಜೊತೆಗೆ ಬಡ ಜನರ ಬದುಕಿನ ಬಗ್ಗೆ ಕಾಳಜಿವಹಿಸಿ ಸೇವೆಯನ್ನು ನೀಡುವ ಮನ ಸ್ಥಿತಿ ನಾವು ಬೆಳೆಸಿಕೊಳ್ಳಬೇಕು. ಇದುವೆ ನಿಜವಾದ ದೇಶ ಸೇವೆ ಎಂದು ಹಿರಿಯ ಐ.ಎ.ಎಸ್ ಅಧಿಕಾರಿ ರಾಜೇಶ್ ಪ್ರಸಾದ್ ವಿದ್ಯಾರ್ಥಿಗಳಿಗೆ ಮಾಗ೯ದಶ೯ನವಿತ್ತರು.
ಸಭಾಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ
ಸುರೇಶ್ ವಹಿಸಿದ್ದರು.ಪ್ರೆುಾ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ನಿವೃತ್ತ ಪ್ರಾಧ್ಯಾಪಕ ಎಂಜಿಎಂ. ಕಾಲೇಜು ಐ.ಕ್ಯೂ.ಎ.ಸಿ.ಸಂಯೇಾಜಕಿ ಡಾ.ಮೇವಿ ಮಿರಾಂಡಾ ಡಾ. ರಾಘವ ನಾಯ್ಕ ವಿದ್ಯಾರ್ಥಿ ಕ್ಷೇಮಪಾಲಾಧಿಕಾರಿ ಸ್ನಾತಕೋತ್ತರ ವಿಭಾಗ, ಉಮೇಶ್ ಪೈ ಸಹ ಪ್ರಾಧ್ಯಾಪಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಜಯಂತ್ ಸ್ವಾಗತಿಸಿದರು.ಸಂಧ್ಯಾ ಅಡಿಗ ಧನ್ಯವಾದವಿತ್ತರು. ತ್ರಿವೇಣಿ ಕಾರ್ಯಕ್ರಮ ನಿರುಾಪಿಸಿದರು.