ಉಡುಪಿ ಲಯನ್ಸ್ ಕ್ಲಬ್: ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆ

ಉಡುಪಿ ಲಯನ್ಸ್ ಕ್ಲಬ್ ವತಿಯಿಂದ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆಯನ್ನು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಡಿ.27 ರಂದು ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‌ನ ಧರ್ಮಗುರುಗಳಾದ ಚಾರ್ಲ್ಸ್ ಮೆನೇಜಸ್ ಕ್ರಿಸ್ಮಸ್ ಸಂದೇಶ ನೀಡಿ ಮಾತನಾಡಿದ ಅವರು, ಮನುಷ್ಯನಿಗೆ ಯಾವಾಗ ನಾನು, ನನ್ನದು ಎಂಬ ಅಹಂ ಬರುತ್ತದೆಯೋ ಅಂದೇ ದೇವರು ನಮ್ಮನ್ನು ಕೈಬಿಡುತ್ತಾರೆ ಎಂದರು. ಯಾವುದೇ ಜಾತಿ‌ ಧರ್ಮ ‌ನೋಡದೆ ಸಾಮಾಜಿಕ ಕಳಕಳಿಯ ಕೆಲಸ ಮಾಡುವ ಲಯನ್ಸ್ ಕ್ಲಬ್‌ನ ಸೇವೆ ಅನನ್ಯವಾದದು ಎಂದು ಸಂಸ್ಥೆಯನ್ನು ಶ್ಲಾಘಿಸಿದರು.

ಲಯನ್ಸ್ ಗವರ್ನರ್ ಡಾ.ನೇರಿ ಕರ್ನೆಲಿಯೋ ಅವರು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯ ತಿಳಿಸಿದರು.

ಸಮಾರಂಭದಲ್ಲಿ ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ರವೀಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ವಿಜಯ್ ಕುಮಾರ್ ಮುದ್ರಾಡಿ, ಕೋಶಾಧಿಕಾರಿ ದೀವಾ ನಂಬಿಯಾರ್, ವಿ.ಪ್ರಸಾದ್ ಶೆಟ್ಟಿ, ಡಾ.ರವೀಂದ್ರನಾಥ್ ಶೆಟ್ಟಿ, ಲ.ಲೂವಿಸ್ ಲೋಬೋ, ಲ.ಅಲೆವೂರು ದಿನೇಶ್ ಕಿಣಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!