ನಿಟ್ಟೆ ಅಂತಾರಾಷ್ಟ್ರೀಯ ಸಮ್ಮೇಳನ

ಕಾರ್ಕಳ,ಡಿ.29:ಕೋವಿಡ್ ಉತ್ತರಾರ್ಧ ಜಗತ್ತು ಒಂದು ರೀತಿಯಲ್ಲಿ ಸುಧೃಡತೆಯನ್ನು ಪಡೆಯುತ್ತಿರುವುದು ನಿಜಕ್ಕು ಸಂತಸದ ವಿಚಾರ. 2020-2022 ರಲ್ಲಿ ಸಂಪೂರ್ಣ ನಿಸ್ತೇಜ ಹೊಂದಿದ ಕಾರ್ಪರೇಟ್ ವಲಯ ಪ್ರಸ್ತುತ ಹೊಸ ಜ್ಞಾನ, ಕಲಿಕೆ ತಾಂತ್ರಿಕ ಅಳವಡಿಸುವಿಕೆಯಿಂದ ತೀರಾ ಭಿನ್ನವಾಗಿ ಕಾರ್ಯನಿರ್ವಹಿಸುತ್ತಿರುವುದು ಒಂದುವಿಶಿಷ್ಠ ‘ಸಂಶೋಧನೆಗೆ’ ನಾಂದಿ ಹಾಡಿದೆ. 

ಕೋವಿಡ್ ಸಮಸ್ಯೆ ಜನತೆಯನ್ನು ಹೆಚ್ಚು, ಹೆಚ್ಚು ನಿಖರತೆಯನ್ನು ಬಯಸುವಂತೆ ಮಾಡಿದೆ. ಪ್ರತಿ ವಲಯದಲ್ಲಿಯೂ ‘ಹೊಸ ಕಲಿಕೆ’, ಹೊಸ ಜೀವನ ಪದ್ಧತಿ, ‘ಹೊಸ ತಂತ್ರಜ್ಞಾನ’ ಚಾಲ್ತಿಗೆ ಬಂದಿದೆ. ತಂತ್ರಜ್ಞಾನ ಎಷ್ಟೋ ಬಾರಿ “ಅಪ್ರಸ್ತುತ ಮಾಹಿತಿ”ಯನ್ನು ಪಸರಿಸುವ ವಾಹಕಗಳಾಗಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಬೇಸರದ ವಿಚಾರ. ವಿಮರ್ಶಾತ್ಮಕ, ತಾರ್ಕಿಕ, ವಾಸ್ತವ ಚಿಂತನೆಗಳನ್ನು ಸಕಾಲಿಕವಾಗಿ ಅಭಿವೃದ್ಧಿಪಡೆಸುತ್ತಿರಬೇಕು ಎಂದು ಅಮೇರಿಕಾದ ಕನೆಕ್ಟಿಕಟ್ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೊಫೆಸರ್ ಡಾ. ನರಸಿಂಹನ್ ಶ್ರೀನಿವಾಸನ್ ಅಭಿಪ್ರಾಯಪಟ್ಟರು.

ಅವರು ನಿಟ್ಟೆಯ ಜಸ್ಟೀಸ್ ಕೆ. ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯು ಆಯೋಜಿಸಿದ ಎರಡು ದಿನಗಳು 8ನೇಯ ನಿಟ್ಟೆ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣಗೈದರು.

ಈ ಅಂತಾರಾಷ್ಟ್ರೀಯ ಸಮ್ಮೇಳನವು “ಕೋವಿಡ್  ಉತ್ತರಾರ್ಧದ ಪುನಃಶ್ಚೇತನ:ಸವಾಲುಗಳು ಮತ್ತು ಕಾಳಜಿ” ಅನ್ನುವ ವಿಷಯಕ್ಕೆ ಸಂಬಂಧಿಸಿ ಆಯೋಜಿಸಲಾಗಿತ್ತು. ಈ ಸಮ್ಮೇಳನವು ದಿ ನೆದರ್ಲೆಂಡ್ ನ  ರೋಟರ್ ಡಮ್ ಸ್ಕೂಲ್ ಒಫ್ ಮ್ಯಾನೇಜ್ಮೆಂಟ್, ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಯ, ಕನೆಕ್ಟಿಕಟ್ ವಿ.ವಿ ಹಾಗೂ ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯಗಳ ಸಹಯೋಗದೊಂದಿಗೆ ಡಿ 28-29  ಆಯೋಜಿಸಲಾಗಿತ್ತು.

ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಯಶವಂತ ಡೋಂಗ್ರೆ ಅವರು ಸಮ್ಮೇಳನವನ್ನು ಉದ್ಘಾಟಿಸಿ ಕೋವಿಡ್ ಪ್ರತಿ ವಲಯಕ್ಕೂ ಅದರ ಕೆಟ್ಟಪರಿಣಾಮಗಳನ್ನುಪಸರಿಸಿರುವುದು  ಮಾತ್ರವಲ್ಲದೆ ಪ್ರತಿ ಕ್ಷೇತ್ರವು ಕೈಗೊಳ್ಳುವಆವಿಷ್ಕಾರ ಮಾನವ ಜೀವನವನ್ನು ಪ್ರಸ್ತುತ ಹಾಗೂ ಇನ್ನು ಮುಂದೆಯೂ ಉಜ್ವಲಗೊಳಿಸಲಿದೆ ಎಂದರು. 

ಮುಖ್ಯ ಅತಿಥಿಗಳಾದ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲದ ಕುಲಪತಿಗಳಾದ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ ಅವರು ಮಾತನಾಡುತ್ತಾ, ಶಿಕ್ಷಣ ಕೇಂದ್ರಗಳು, ವಿವಿಗಳು, ರಾಷ್ಟ್ರಗಳು, ಜನತೆ, ಉದ್ದಿಮೆಗಳು ಸೂಕ್ತ ಒಡಂಬಡಿಕೆ ಮತ್ತು ಉತ್ತಮ ಸಂಬಂಧಗಳನ್ನು ಉತ್ತೇಜಿಸುವ ಅನಿವಾರ್ಯತೆ ಹಿಂದಿಗಿಂತಲೂ ಇಂದು ಹೆಚ್ಚು ಎಂದು ಅಭಿಪ್ರಾಯಪಟ್ಟರು. ಪ್ರೊ.ಡಾ.ಗೋಪಾಲ ಮುಗೇರಾಯ, ಉಪಾಧ್ಯಕ್ಷರು (ತಾಂತ್ರಿಕ ಶಿಕ್ಷಣ), ನಿಟ್ಟೆ ವಿಶ್ವವಿದ್ಯಾನಿಲಯ ಅವರು ಕೋವಿಡ್ ನ ಉತ್ತರಾರ್ಧ ಜಗತ್ತಿನ ಜನತೆ ‘ಹೊಂದಾಣಿಕೆ’ ಮೂಲಕ ಹೆಚ್ಚಿನ ಯಶಸ್ಸನ್ನು ಪಡೆಯಲು ಸಾಧ್ಯ ಎಂದರು. 

ಸಂಸ್ಥೆಯ ನಿರ್ದೇಶಕರು ಹಾಗೂ ಸಮಾರಂಭದ ಅಧ್ಯಕ್ಷರಾದಡಾ. ಗುರುರಾಜ್ ಎಚ್ ಕಿದಿಯೂರು ಸಮ್ಮೇಳನದ ಆಶಯವನ್ನು ಸಾಂದರ್ಭಿಕವಾಗಿ ತಿಳಿಹೇಳಿದರು.

ಸಮ್ಮೇಳನದ ಕನ್ವಿನರ್ ಡಾ. ಟಿ. ಮಲ್ಲಿಕಾರ್ಜುನಪ್ಪ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿ ಸಮ್ಮೇಳನದ ಆಶಯ ನೀಡಿದರು. ಸಮ್ಮೇಳನದ ವ್ಯವಸ್ಥಾಪನಾ ಕಾರ್ಯದರ್ಶಿ ಡಾ. ಸುಧೀರ್ ಎಂ ವಂದನಾರ್ಪಣೆಗೈದರು. ನಿಧಿ ಪ್ರಾರ್ಥಿಸಿದರು,ಶಮ, ರಕ್ಷಿತಾ, ಡಾ. ಸುಧೀರ್ ರಾಜ್. ಕೆ ಕಾರ್ಯಕ್ರಮ ನಿರ್ವಹಿಸಿದರು. ಚರ್ಚೆಗಳು, ಪ್ರಭಂದಮಂಡನೆ, ಸಂಶೋಧನಾ ಕಾರ್ಯಾಗಾರಗಳು ನಡೆದವು. ದೇಶ ವಿದೇಶಗಳಿಂದ ಹಲವಾರು ವಿದ್ವಾಂಸರು ಸಮ್ಮೇಳನದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿರುವುದು ಮಾತ್ರವಲ್ಲದೆ ಸಮ್ಮೇಳನ ವ್ಯವಸ್ಥೆಗೊಳಿಸಿರುವ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!