ಕೊವೀಡ್ ಸೋಂಕಿನಿಂದ ತಮಿಳು ಚಿತ್ರರಂಗದ ಖ್ಯಾತ ನಟ, ಡಿಎಂಡಿಕೆ ಸ್ಥಾಪಕ ಕ್ಯಾ. ವಿಜಯ್ ಕಾಂತ್ ನಿಧನ
ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ಡಿಎಂಡಿಕೆ ಪಕ್ಷದ ಅಧ್ಯಕ್ಷ ಕ್ಯಾಪ್ಟನ್ ವಿಜಯಕಾಂತ್ (71) ಅವರು ನ್ಯೂಮೋನಿಯಾ ಜ್ವರದಿಂದ ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಕಳೆದ ತಿಂಗಳು ನವೆಂಬರ್ 20ರಂದು ನಿಯಮಿತ ಆರೋಗ್ಯ ತಪಾಸಣೆಗಾಗಿ ಚೆನ್ನೈನ ಎಂಐಒಟಿ ಇಂಟರ್ನ್ಯಾಷನಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಂತರ ಅವರನ್ನು ವೆಂಟಿಲೇಟರ್ ಸಹಾಯದಿಂದ ಇರಿಸಲಾಗಿತ್ತು.
ಸ್ವಲ್ಪ ಗುಣಮುಖರಾದ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಮರಳಿ ಬಂದಿದ್ದರು. ಮತ್ತೆ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿ ಇಂದು ಬೆಳಗ್ಗೆ ಅಸುನೀಗಿದ್ದಾರೆ.
ನಾರಾಯಣನ್ ವಿಜಯರಾಜ್ ಅಲಗರಸ್ವಾಮಿ (25 ಆಗಸ್ಟ್ 1952 – 28 ಡಿಸೆಂಬರ್ 2023) ವಿಜಯಕಾಂತ್ ಎಂಬ ರಂಗನಾಮದಿಂದ ಚಿರಪರಿಚಿತರಾಗಿದ್ದರು, ಅವರು ತಮಿಳು ಚಿತ್ರರಂಗ ದಲ್ಲಿ ಖ್ಯಾತ ನಟರಾಗಿದ್ದು, ರಾಜಕಾರಣಿಯೂ ಹೌದು. 2011 ರಿಂದ 2016 ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಯಶಸ್ವಿ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದರು. ಅವರು ದೇಸಿಯ ಮುರ್ಪೋಕ್ಕು ದ್ರಾವಿಡ ಕಳಗಂ (DMDK) ರಾಜಕೀಯ ಪಕ್ಷದ ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದರು. ವಿರುಧಾಚಲಂ ಮತ್ತು ರಿಷಿವಂಡಿಯಂ ಕ್ಷೇತ್ರವನ್ನು ಪ್ರತಿನಿಧಿಸಿ ಎರಡು ಬಾರಿ ಶಾಸಕರಾಗಿದ್ದರು.
ವಿಜಯಕಾಂತ್ 1952ರ ಆಗಸ್ಟ್ 25ರಂದು ಮಧುರೈನಲ್ಲಿ ಜನಿಸಿದರು. ಅವರ ಪೋಷಕರು ಕೆ.ಎನ್.ಅಲಗರಸ್ವಾಮಿ ಮತ್ತು ಆಂಡಾಳ್ ಅಳಗರ್ಸ್ವಾಮಿ. ಜನವರಿ 31, 1990 ರಂದು ಪ್ರೇಮಲತಾ ಅವರನ್ನು ವಿವಾಹವಾಗಿ ಷಣ್ಮುಗ ಪಾಂಡಿಯನ್ ಸೇರಿದಂತೆ ಇಬ್ಬರು ಗಂಡು ಮಕ್ಕಳಿದ್ದಾರೆ. ವಿಜಯಕಾಂತ್ ಅವರು 154 ಚಲನಚಿತ್ರಗಳಲ್ಲಿ ನಟಿಸಿ ನಂತರ ರಾಜಕೀಯಕ್ಕೆ ಪ್ರವೇಶಿಸಿ DMDK ಪಕ್ಷ ಸ್ಥಾಪಿಸಿದರು.