ಕಲ್ಸಂಕದಲ್ಲಿ ಸೂಚನಾ ಫಲಕ ಅಳವಡಿಸುವಂತೆ ಆಗ್ರಹ

ಉಡುಪಿ: ನಗರದ ಕಲ್ಸಂಕ‌ ಜಂಕ್ಷನ್ ಬಳಿ ಶ್ರೀಕೃಷ್ಣ ಮಠಕ್ಕೆ ಹೋಗುವ ದಾರಿಯ ಸೂಚನ ಫಲಕ ಅಳವಡಿಸುವಂತೆ ಸಾರ್ವಜನಿಕರ ಒತ್ತಾಯ ಕೇಳಿಬರುತ್ತಿದೆ.

ಪ್ರತಿನಿತ್ಯ ಮಠಕ್ಕೆ ನೂರಾರು ವಾಹನಗಳು ಅಂಬಾಗಿಲು, ಮಣಿಪಾಲ, ಕರಾವಳಿ ಬೈಪಾಸ್ ಕಡೆಯಿಂದ ಬರುತ್ತದೆ. ಪ್ರವಾಸಿಗರು ಮಠದ ಪಾರ್ಕಿಂಗ್ ಸ್ಥಳದ ಗೊಂದಲದಿಂದ ನಗರಕ್ಕೆ ಪ್ರವೇಶ ಪಡೆದು ಸಿಟಿಯಲ್ಲಿ ದಿನನಿತ್ಯ ಟ್ರಾಫಿಕ್ ಜಾಮ್‌ ಆಗುತ್ತಿದೆ. ಆದ್ದರಿಂದ ಕಲ್ಸಂಕ ಜಂಕ್ಷನ್ ಬಳಿ ಶ್ರೀ ಕೃಷ್ಣ ಮಠಕ್ಕೆ ಹೋಗುವ ಸೂಚನ ಫಲಕ‌ ಅಳವಡಿಸಬೇಕು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರವಾಸಿಗರ ವಾಹನವು ಗೂಗಲ್ ಮ್ಯಾಪ್‌ ಹಾಕಿ ನಗರ ಪ್ರವೇಶಿಸಿ ಬಡಗುಪೇಟೆ, ನಾರ್ಥ್ ಸ್ಕೂಲ್, ಸಂಸ್ಕೃತ ಶಾಲೆ, ಚಿತ್ತರಂಜನ್ ಸರ್ಕಲ್ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡುವುದರ ಪರಿಣಾಮ ನಗರದಲ್ಲಿ ಸುಗಮ ಸಂಚಾರಕ್ಕೆ ಬಹಳ ಅಡಚಣೆ ಉಂಟಾಗುತ್ತಿದೆ.

ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಉಡುಪಿ ನಗರ ಸಭೆ ಅಥವಾ ಶ್ರೀಕೃಷ್ಣ ಮಠದ ವತಿಯಿಂದ ಶೀಘ್ರವಾಗಿ ಸೂಚನ ಫಲಕ ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!