ಉಡುಪಿ ನಗರಸಭೆ ಉಪಚುನಾವಣೆ: ಶೇ. 67.92ರಷ್ಟು ಮತದಾನ

ಉಡುಪಿ: ಉಡುಪಿ ನಗರಸಭೆಯ 13ನೇ ಮೂಡುಪೆರಂಪಳ್ಳಿ ವಾರ್ಡ್‌ಗೆ ಬುಧವಾರ ನಡೆದ ಉಪಚುನಾವಣೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು ಒಟ್ಟು 67.92ರಷ್ಟು ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

ಈ ವಾರ್ಡಿನಲ್ಲಿ ಒಟ್ಟು 3002 ಮಂದಿ ಮತದಾರರರಿದ್ದು, ಇವರಲ್ಲಿ 2039 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 1454 ಪುರುಷ ಮತದಾರ ರಲ್ಲಿ 981 ಮಂದಿ ಹಾಗೂ 1546 ಮಂದಿ ಮಹಿಳಾ ಮತದಾರರಲ್ಲಿ 1058 ಮಂದಿ ತಮ್ಮ ಮತ ಚಲಾಯಿಸಿದ್ದಾರೆ.

ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ನಡೆಯಿತು. ನಿಧಾನಗತಿಯಲ್ಲಿ ಪ್ರಾರಂಭಗೊಂಡ ಮತದಾನ 11 ಗಂಟೆಯ ಬಳಿಕ ಬಿರುಸು ಪಡೆದುಕೊಂಡಿತು. ಅಪರಾಹ್ನ 1 ಗಂಟೆ ವೇಳೆಗೆ ಶೇ.47.34ರಷ್ಟು ಮಂದಿ ತಮ್ಮ ಮತ ಚಲಾಯಿಸಿದ್ದರು.

Leave a Reply

Your email address will not be published. Required fields are marked *

error: Content is protected !!