ಪೆರಂಪಳ್ಳಿ: ನಗರಸಭಾ ಉಪಚುನಾವಣೆ- ಕಾಂಗ್ರೆಸ್ ಮುಖಂಡರಿಂದ ಬಿರುಸಿನ ಪ್ರಚಾರ
ಉಡುಪಿ: ನಗರಸಭೆಯ 13ನೇ ಪೆರಂಪಳ್ಳಿ ವಾರ್ಡಿನ ಉಪಚುನಾವಣೆ ಡಿ. 27ರಂದು ನಡೆಯಲಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರುತಿ ಅವರ ಪರವಾಗಿ ಕಾಂಗ್ರೆಸ್ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್, ಕುಶಲ್ ಶೆಟ್ಟಿ, ಗೀತಾ ವಾಗ್ಲೆ, ಜ್ಯೋತಿ ಹೆಬ್ಬಾರ್ ಅವರು ಮನೆ ಮನೆಗಳಿಗೆ ತೆರಳಿ ಕರ್ನಾಟಕ ರಾಜ್ಯ ಸರ್ಕಾರದ ಜನಪರ ಯೋಜನೆ ಹಾಗೂ ಗ್ಯಾರಂಟಿಗಳ ಬಗ್ಗೆ ತಿಳಿಸಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ನಾಯಕರಾದ ಗಣೇಶ್ ನೆರ್ಗಿ, ಸತೀಶ್ ಕೊಡವೂರು, ಲಕ್ಷ್ಮಣ್ ಪೂಜಾರಿ, ಡಾ. ಸುನಿತಾ ಶೆಟ್ಟಿ, ರೋಶ್ನಿ ಓಲಿವರ್, ಯುವರಾಜ್ ಪುತ್ತೂರು, ಸುರೇಶ್ ಶೆಟ್ಟಿ ಬನ್ನಂಜೆ, ಶಶಿರಾಜ್ ಕುಂದರ್, ಚಂದ್ರಿಕಾ ಶೆಟ್ಟಿ, ಹಮ್ಮದ್, ಯಾದವ್ ಆಚಾರ್ಯ, ಯತೀಶ್ ಕರ್ಕೇರ, ಸುಕೇಶ್ ಕುಂದರ್, ಪ್ರಶಾಂತ್ ಪೂಜಾರಿ, ಲತಾ ಆನಂದ್ ಶೇರಿಗಾರ್, ಹೇಮಲತಾ ಜತ್ತನ್ನ, ರಮೇಶ್ ಪೂಜಾರಿ, ಸತೀಶ್ ಪುತ್ರನ್, ಶರತ್ ಶೆಟ್ಟಿ, ಸುಕನ್ಯಾ ಪೂಜಾರಿ, ಮೀನಾಕ್ಷಿ ಮಾಧವ ಬನ್ನಂಜೆ, ಸ್ಥಳೀಯ ಮುಖಂಡರಾದ ಶ್ರೀಕಾಂತ್, ಜಯರಾಮ್, ಸುಧಾಕರ್, ಲಕ್ಷ್ಮಣ್ ಪೂಜಾರಿ, ವೆಂಕಟೇಶ್ ಪೆರಂಪಳ್ಳಿ, ವಿಲಿಯಮ್, ಆಲ್ವಿನ್, ಜೊಸ್ಸಿ ಪಿಂಟೋ, ರಿಚಾರ್ಡ್ ಡಿಸಿಲ್ವಾ, ಅಗ್ನೇಲ್, ಅಜಿತ್ ಡಿಸೋಜಾ, ಪೀಟರ್, ಸಿಡ್ನಿ, ಪ್ರವೀಣ್, ಜೇಮ್ಸ್, ಬಬಿತಾ, ರಾಯಿಸ್ಟಾನ್, ನತಾಲಿಯಾ, ಫೆಲಿಕ್ಸ್ ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.