ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾ ಮಹಿಳಾ ಘಟಕ ಅಸ್ತಿತ್ವಕ್ಕೆ

ಉಡುಪಿ: “ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ”(SASS) ಇದರ ರಾಷ್ಟ್ರೀಯ ಅಧ್ಯಕ್ಷರಾಗಿರುವ, ಟಿ. ಬಿ.ಶೇಖರ್ ಹಾಗೂ ರಾಜ್ಯಾಧ್ಯಕ್ಷರಾದ ಡಾ.ಜಯರಾಂ ಅವರ ನಿರ್ದೇಶನದ ಮೇರೆಗೆ, ಉಡುಪಿ ಜಿಲ್ಲಾ SAAS ನ ಮಹಿಳಾ ಸಂಚಾಲಕಿಯಾಗಿ ತಾರಾ ಯು. ಆಚಾರ್ಯ ಇವರನ್ನು ನಿಯೋಜಿಸಲಾಗಿದೆ.

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ಉಡುಪಿ ಜಿಲ್ಲಾಧ್ಯಕ್ಷರಾದ ರಾಧಾಕೃಷ್ಣ ಮೆಂಡನ್ ರವರು ಈ ಆಯ್ಕೆಯನ್ನು ಅನುಮೋದಿಸಿದ್ದು, ಇದೇ ಡಿ. 31 ಭಾನುವಾರ, ಬೆಳಿಗ್ಗೆ 10.30 ಗಂಟೆಗೆ ಶಬರಿಮಲೆ ಶ್ರೀ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ ಮತ್ತು ತಾಲೂಕು ,ಹಾಗೂ ಶ್ರೀ ಅಯ್ಯಪ್ಪ ಮಂದಿರ ಮಲ್ಪೆ ಇದರ ಜಂಟಿ ಆಶ್ರಯದೊಂದಿಗೆ ಮಲ್ಪೆಯ ಅಯ್ಯಪ್ಪ ಮಂದಿರ ವಠಾರದಲ್ಲಿ ನಡೆಯಲಿರುವ “ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರ ಸಮಾವೇಶ” ಮತ್ತು “ಹರಿವರಾಸನಂ ಶತಮಾನೋತ್ಸವ” ಆಚರಣೆಯ ಸಮಾರಂಭದ ಸಂದರ್ಭದಲ್ಲಿ , ಉಡುಪಿ ಜಿಲ್ಲಾ ಮಹಿಳಾ SASS ನ ಪದಗ್ರಹಣ ಕಾರ್ಯಕ್ರಮವು ನೆರವೇರಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!