ಪುತ್ತಿಗೆ ಪರ್ಯಾಯ- 2024-2026: ಚಪ್ಪರ ಮುಹೂರ್ತ ಸಂಪನ್ನ

ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರ ಚತುರ್ಥ ಪರ್ಯಾಯೋತ್ಸವವು 2024 ರಿಂದ 2026ನೇ ಇಸವಿಯವರೆಗೆ ಜರಗಲಿದೆ. ಆ ಪ್ರಯುಕ್ತವಾಗಿ ಇಂದು ಬೆಳಿಗ್ಗೆ 7.45ರ ಶುಭ ಘಳಿಗೆಯಲ್ಲಿ ರಾಘವೇಂದ್ರ ಕೊಡಂಚರ ಪೌರೋಹಿತ್ಯದಲ್ಲಿ ಚಪ್ಪರ ಮುಹೂರ್ತ ಗೀತಾಮ೦ದಿರದ ಮುಂಭಾಗದಲ್ಲಿ ನಡೆಸಲಾಯಿತು.

ಚಪ್ಪರ ನಿರ್ವಹಣೆಯ ರಾಜೇಶ್, ಮುಚ್ಚೂರು ರಾಮಚಂದ್ರ ಭಟ್ ನಾಗರಾಜ್ ಉಪಾಧ್ಯ ಹಾಗೂ ಶ್ರಿ ಮಠದ ಮೇಸ್ತ್ರಿ ಪದ್ಮನಾಭ ಎಸ್ ರವರಿಗೆ ಕಾರ್ಯ ನಿರ್ವಹಣೆಯ ಮುಹೂರ್ತ ಪ್ರಸಾದ ನೀಡಲಾಯಿತು. ಇದೇ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ.ರಘುಪತಿ ಭಟ್ ರವರು ಪರ್ಯಾಯ ಪ್ರಚಾರಕ್ಕಾಗಿ ಮಾಡಲ್ಪಟ್ಟ ವಾಹನ ಸ್ಟಿಕರ್ಸ್ ಗಳನ್ನು ಬಿಡುಗಡೆಗೊಳಿಸಿದರು.

ಶ್ರೀ ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ಕೋಶಾಧಿಕಾರಿ ಕೆ.ರಂಜನ್ ಕಲ್ಕೂರ, ಕಾರ್ಯದರ್ಶಿ ರಾಘವೇಂದ್ರ ಕಿಣಿ, ಸಮಿತಿಯ ಪದಾಧಿಾರಿಗಳಾದ ಗುರುರಾಜ ಉಪಾಧ್ಯ, ವಿಷ್ಣುಮೂರ್ತಿ ಉಪಾಧ್ಯ, ರವೀಂದ್ರ ಆಚಾರ್ಯ, ರಘುಪತಿ ರಾವ್, ಹಯವದನ ಭಟ್, ರಾಮ ಕೊಡಂಚ , ನಾಗರಾಜ ರಾವ್ , ರಾಮಚಂದ್ರ ಸನಿಲ್, ಸುಮಿತ್ರಾ ಕೆರೆಮಠ, ಅಮಿತ ಕ್ರಮಧಾರಿ, ಸರೋಜಾ, ಗೀತಾ ಮುಂತಾದ ಸದಸ್ಯರೂ ಉಪಸ್ಥಿತರಿದ್ದರು. ರಮೇಶ್ ಭಟ್ ಕೆ. ಸ್ವಾಗತಿಸಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *

error: Content is protected !!