ಹಂದಿ ಮಾಂಸ ಮತ್ತು ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ
ಮಂಗಳೂರು, ಡಿ.20: 2019-20ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ಸ್ಥಾಪಿತ “ಕರಾವಳಿ ಹಂದಿ ರೈತ ಉತ್ಪಾದಕ ಕಂಪೆನಿ ಲಿ.” ಹಂದಿ ಮಾಂಸ ಮತ್ತು ಉತ್ಪನ್ನಗಳ ಮಾರಾಟ ನೂತನ ಮಳಿಗೆಯ ಉದ್ಘಾಟನೆ ನಗರದ ಸೈಂಟ್ ಜೋಸೆಫ್ ಸೆಮಿನರಿ ಜೆಪ್ಪು ಇಲ್ಲಿ ಡಿಸೆಂಬರ್ 22ರಂದು ಬೆಳಿಗ್ಗೆ 10.30ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಮೇಯರ್ ಸುಧೀರ್ ಶೆಟ್ಟಿ ಉದ್ಘಾಟಿಸುವರು, ಬಂಟ್ವಾಳ “ಕರಾವಳಿ ಹಂದಿ ರೈತ ಉತ್ಪಾದಕ ಕಂಪೆನಿ ಲಿಮಿಟೆಡ್ ನ ಅಧ್ಯಕ್ಷ ಫ್ರಾನ್ಸಿಸ್ ಮೊಂತೇರೋ ಅಧ್ಯಕ್ಷತೆ ವಹಿಸುವರು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಟಕಣೆಯಲ್ಲಿ ತಿಳಿಸಿದ್ದಾರೆ.