ಉಡುಪಿ: ನಗರಸಭೆ ಉಪಚುನಾವಣೆ- ಮದ್ಯ ಮಾರಾಟ ನಿಷೇಧ

ಉಡುಪಿ,ಡಿ.20:ಉಡುಪಿ ನಗರಸಭೆಯ 13ನೇ ಮೂಡುಪೆರಂಪಳ್ಳಿ ವಾರ್ಡ್‌ನ ಉಪಚುನಾವಣೆಯು ಡಿಸೆಂಬರ್ 27 ರಂದು ನಡೆಯಲಿರುವ ಹಿನ್ನೆಲೆ, ಡಿ.26 ರ ಬೆಳಗ್ಗೆ 6 ಗಂಟೆಯಿಂದ ಡಿ.27ರ ರಾತ್ರಿ 12 ಗಂಟೆಯವರೆಗೆ ಸದರಿ ವಾರ್ಡ್ನ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯದಂಗಡಿ,ಮದ್ಯ ಮಾರಾಟ ಡಿಪೋ,ಮದ್ಯ ತಯಾರಿಕಾ ಡಿಸ್ಟಿಲರಿ,ಸ್ಟಾರ್ ಹೋಟೆಲ್ ಹಾಗೂ ಶೇಂದಿ ಅಂಗಡಿಗಳನ್ನು ಮುಚ್ಚಲು ಆದೇಶಿಸಿ, ಮದ್ಯ ಮಾರಾಟ ನಿಷೇಧಿಸಿ,ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!