ಸಂಸತ್ತಿನಿಂದ ಇಂದು ಮತ್ತೆ 49 ಸದಸ್ಯರ ಅಮಾನತು- ಇವರೆಗೆ 141 ಸಂಸದರ ಅಮಾನತು!

ಹೊಸದಿಲ್ಲಿ: ಸಂಸತ್ತಿನಲ್ಲಿ ಇಂದು ಇನ್ನೂ 49 ಮಂದಿ ವಿಪಕ್ಷಗಳ ಸಂಸದರನ್ನು ಅಶಿಸ್ತಿನ ನಡವಳಿಕೆಗಾಗಿ ಅಮಾನತುಗೊಳಿಸಲಾಗಿದೆ. ಸ್ಪೀಕರ್‌ ಅವರ ಸೂಚನೆಗಳನ್ನು ಪಾಲಿಸಲು ವಿಫಲರಾಗಿದ್ದೇ ಅಲ್ಲದೆ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಳಾಗಿದೆ.

ಸೋಮವಾರ ಸಂಸತ್ತಿನ ಎರಡೂ ಸದನಗಳಿಂದ 78 ಸಂಸದರನ್ನು ಇದೇ ಕಾರಣಕ್ಕಾಗಿ ಅಮಾನತುಗೊಳಿಸಲಾಗಿತ್ತು. ಇದುವರೆಗೆ ಒಟ್ಟು 141 ಸಂಸದರನ್ನು ಅಮಾನತುಗೊಳಿಸಲಾಗಿದೆ.

ಇತ್ತೀಚೆಗೆ ನಡೆದ ಸಂಸತ್‌ ಭದ್ರತಾ ವೈಫಲ್ಯದ ಕುರಿತು ಚರ್ಚೆಗೆ ಹಾಗೂ ಗೃಹ ಸಚಿವರ ಹೇಳಿಕೆಗೆ ವಿಪಕ್ಷಗಳು ಸಂಸತ್ತಿನಲ್ಲಿ ಪಟ್ಟು ಹಿಡಿದ ನಂತರದ ಬೆಳವಣಿಗೆ ಇದಾಗಿದೆ.

Leave a Reply

Your email address will not be published. Required fields are marked *

error: Content is protected !!