ಉಡುಪಿ: ಬಿಲ್ಲವ ಮುಖಂಡ, ಕೊಡುಗೈ ದಾನಿ ವಿಶ್ವನಾಥ್ ಸನಿಲ್ ನಿಧನ
ಉಡುಪಿ: ಬಿಲ್ಲವ ಸಮಾಜದ ಹಿರಿಯರಾದ ಕೊಡುಗೈ ದಾನಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ, ಹೇರೂರು ತೂಗುಸೇತುವೆ ಹಾಗೂ ಕೆಮ್ಮಣ್ಣು ರುದ್ರಭೂಮಿಯ ನಿರ್ಮಾತ್ರ, ಝೆನಿತ್ ಡೈ ಮೇಕರ್ಸ್ ನೀಲಾವರ ಇದರ ಮಾಲಕರಾದ ವಿಶ್ವನಾಥ್ ಸನಿಲ್ (82) ಇವರು ಇಂದು ಅನಾರೋಗ್ಯ ನಿಧನರಾಗಿದ್ದಾರೆ.
ಮೃತರು ಪತ್ನಿ ಯಶೋಧ, ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ. ಇವರ ಅಂತ್ಯ ಕ್ರಿಯೆಯು ನಾಳೆ (ಡಿ.16) ಮಧ್ಯಾಹ್ನ ಸ್ವಗೃಹ ಸಮೀಪ ನಡೆಯಲಿದೆಂದು ಕುಟುಂಬ ಮೂಲಗಳು ತಿಳಿಸಿವೆ.