ಬಹು ನಿರೀಕ್ಷೆಯ “ಉಡುಪಿ ಉತ್ಸವ” ಡಿ.17 ರಿಂದ ಪ್ರಾರಂಭ

ಉಡುಪಿ, ಡಿ.14: ನ್ಯಾಷನಲ್ ಕನ್ಸೂಮರ್ ಫೇರ್ (ಎನ್ ಸಿಎಫ್) ಉಡುಪಿ ವತಿಯಿಂದ ಕರಾವಳಿ ಬೈಪಾಸ್ ಬಳಿ ‘ಉಡುಪಿ ಉತ್ಸವ’ ಡಿ.17ರಂದು ಆರಂಭಗೊಳ್ಳಲಿದೆ.

ರಾಷ್ಟ್ರೀಯ ಹೆದ್ದಾರೆ 66 ಶಾರದ ಹೊಟೇಲ್ ಸಮೀಪ 10 ಎಕ್ರೆ ಜಾಗದಲ್ಲಿ ಬೃಹತ್ ಪೆಂಡಲ್ ನಿರ್ಮಾಣವಾಗಿದ್ದು, ಸುಸಜ್ಜಿತ ವಾಹನ ನಿಲುಗಡೆಯೊಂದಿಗೆ ಬೃಹತ್ ವಸ್ತು ಪ್ರದರ್ಶನ, ಮನೋರಂಜನೆ, ಸಾಂಸ್ಕೃತಿಕ ಮೇಳವು ಜಿಲ್ಲೆಯ ವಿವಿಧೆಡೆಗಳಿಂದ ಜನರನ್ನು ತನ್ನೆಡೆಗೆ ಆಕರ್ಷಿಸಲು ಸಜ್ಜಾಗಿದೆ. 150ಕ್ಕೂ ಅಧಿಕ ವಿವಿಧ ಮಳಿಗೆಗಳು ಇದರಲ್ಲಿ ಇದೆ.

ಇಟಾಲಿಯನ್ ಟೊರಾಟೊರಾ, ಡ್ರಾಗನ್ ಕಾರ್, 3ಡಿ ಸಿನೆಮಾ, ಜಾಯಿಂಟ್ ವೀಲ್, ಡ್ರಾಗನ್ ಸ್ಟೀಲ್, ಬ್ರೇಕ್ ಡಾನ್ಸ್ ಮಿನಿ ಟೈನ್, ಹಿಪ್ಪೋಸೈಡ್, ಸಿಗ್ ಸ್ಯಾಗ್, ಎಲೆಕ್ನಿಕ್ ಟೈನ್, ಜೈನಾ ಬಲೂನ್, ಕಪ್ಪೆ ಸವಾರಿ, ಟೈಟಾನಿಕ್ ಜಿಗ್‌ಜಾಗ್, 150 ಮೀ. ಉದ್ದದ ಬಲೂನ್, ಡ್ರಾಗನ್ ಬಲೂನ್ ಹಾಗೂ ರಿಂಗ್ ಗೇಮ್, ಶೂಟಿಂಗ್ ಗೇಮ್ ಇತ್ಯಾದಿಗಳು ಪ್ರಮುಖ ಆಕರ್ಷಣೆಯಾಗಿದೆ.

ಮೈಸೂರು ಸ್ಪೆಷಲ್ ಕಾಂಡಿಮೆಂಟ್ಸ್, ಹೋಮ್‌ ಮೇಡ್ ಐಟಮ್ಸ್ ಚಕ್ಕುಲಿ, ಲಾಡು, ಹಪ್ಪಳ, ಕರಾವಳಿ ಕಾಂಡಿಮೆಂಟ್ಸ್, ಐಸ್ ಕ್ರಿಮ್, ಜ್ಯೂಸ್, ಮಸಾಲ ಪಪ್ಪಡ್, ಸಿಮ್ಲಾ ಚಿಲ್ಲಿ ಭಜ್ಜಿ ಫೀರೈಸ್, ನೀರ್‌ದೋಸೆ, ಕಬಾಬ್, ಆಮ್ಮೆಟ್, ಕರಾವಳಿಯ ತಾಜಾ ಮೀನು ಫೈ, ಕಬ್ಬಿನ ಹಾಲು, ದಾವಣಗೆರೆ ಬೆಣ್ಣೆ ಮಸಾಲ ದೋಸ, ಲಿಂಬು ಜ್ಯೂಸ್, ಕಾಟನ್ ಕ್ಯಾಂಡಿ, ಚೈನೀಸ್, ಚಾಟ್ಸ್, ನಾರ್ತ್ ಇಂಡಿಯನ್, ಸೌತ್ ಇಂಡಿಯನ್, ಮಂಗೋಲಿಯನ್, ಕಾಂಟಿನೆಂಟಲ್ ಡಿಶ್ ಗಳು, ಚರ್‌ಮುರಿ, ಸಿಮ್ಲಾ ಮೆಣಸಿನಕಾಯಿ ಬಜ್ಜಿ ರಾಜಸ್ಥಾನಿ ಉಪ್ಪಿನಕಾಯಿ, ಉತ್ತರ ಕರ್ನಾಟಕದ ಜೋಳದ ವಿವಿಧ ಖಾದ್ಯ, ಬಿಸಿ ಬಿಸಿ ಬನಾನ ಬಜ್ಜಿ, ಜೋಳಪುರಿ, ಫೂಟ್ ಜ್ಯೂಸ್ ಸೇರಿದಂತೆ ವಿವಿಧ ಅಪರೂಪದ ತಿಂಡಿ ತಿನಿಸುಗಳು ಬಾಯಲ್ಲಿ ನೀರೂರಿಸಲಿವೆ. ಯುವ ಸಮೂಹ, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರನ್ನು ಆಕರ್ಷಿಸುವ ಇನ್ನಿತರ ಫಾಸ್ಟ್ ಫುಡ್‌ಗಳು ಹಾಗೂ ವಿವಿಧ ಜಿಲ್ಲೆಗಳ ಹಲವು ಬಗೆಯ ಅಪರೂಪದ ಖಾದ್ಯಗಳನ್ನು ಇಲ್ಲಿ ಸವಿಯ ಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!