ಭಾರತ್ ಬ್ಯಾಂಕ್ ವಿರುದ್ಧ ಜಿಲ್ಲಾ ಗ್ರಾಹಕ ನ್ಯಾಯಾಲಯದಿಂದ ನ್ಯಾಯಾಂಗ ನಿಂದನೆ ಸಮನ್ಸ್ ಜಾರಿ

ಉಡುಪಿ: ಜಿಲ್ಲಾ ಗ್ರಾಹಕ ನ್ಯಾಯಾಲಯವು ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿಯವರ ಗ್ರಾಹಕ ದೂರಿನ ಸಂಖ್ಯೆ: 98/2023ರಲ್ಲಿ ಭಾರತ್ ಬ್ಯಾಂಕ್ (ಮುಂಬೈ) ಲಿ., ಉಡುಪಿ ಶಾಖೆಯ ಮುಖ್ಯಸ್ಥರ ವಿರುದ್ಧ ನಿಯಮ ಬಾಹಿರವಾಗಿ ವಾಹನ ಜಪ್ತಿ ಮಾಡಿರುವ ಕ್ರಮದ ವಿರುದ್ಧ 6.11.2023ರಂದು ಆದೇಶ ಜಾರಿಗೊಳಿಸಿ ದೂರುದಾರರ ವಾಹನವನ್ನು ತಕ್ಷಣವೇ ಅವರಿಗೆ ಹಿಂದಿರುಗಿಸುವಂತೆ ನಿರ್ದೇಶಿಸಿತ್ತು.

ಆದರೆ ಇಲ್ಲಿಯವರೆಗೂ ಈ ಆದೇಶವನ್ನು ಪಾಲನೆ ಮಾಡದಿರುವ ಬಗ್ಗೆ ಇದೀಗ ದೂರುದಾರರು ಮಾನ್ಯ ನ್ಯಾಯಾಲಯಕ್ಕೆ ಪುನಃ ದೂರನ್ನು ಸಲ್ಲಿಸಿದ್ದು, ಈ ದೂರು ಮೇಲ್ನೋಟಕ್ಕೆ ಸಾಬೀತಾಗಿರುವುದರಿ0ದ ಮಾನ್ಯ ನ್ಯಾಯಾಲಯವು ಸದರಿ ದೂರನ್ನು ಪರಿಗಣಿಸಿ ಆರೋಪಿತ ಭಾರತ್ ಬ್ಯಾಂಕ್, ಉಡುಪಿ ಶಾಖೆಗೆ ನ್ಯಾಯಾಂಗ ನಿಂದನೆ ಸಮನ್ಸ್ ನೀಡಿ ಉತ್ತರಿಸುವಂತೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!